Advertisement

ಮಹಿಳೆಯರು ಆರೋಗ್ಯದತ್ತ ಗಮನಹರಿಸಿ

04:56 PM Mar 26, 2021 | Team Udayavani |

ಅರಸೀಕೆರೆ: ನಿತ್ಯ ಮಹಿಳೆಯರು ಕುಟುಂಬದಲ್ಲಿನ ಗಂಡ ಮತ್ತು ಮಕ್ಕಳ ಯೋಗ ಕ್ಷೇಮದ ಬಗ್ಗೆ ಹೆಚ್ಚಿನಆಸಕ್ತಿ ವಹಿಸುವ ಜೊತೆಗೆ ತಮ್ಮ ದೇಹದಆರೋಗ್ಯವನ್ನು ಕಾಪಾಡಿ ಕೊಳ್ಳುವುದನ್ನು ಮರೆಯಬಾರದು ಎಂದು ತಾ. ಆರೋಗ್ಯಾಧಿಕಾರಿ ಡಾ.ನಾಗಪ್ಪ ಹೇಳಿದರು.

Advertisement

ತಾಪಂ ಮತ್ತು ತಾ. ಆರೋಗ್ಯ ಇಲಾಖೆ ಹಾಗೂ ಹಿರಿಯೂರು ಗ್ರಾಪಂ ಸಂಯುಕ್ತಾಶ್ರಯದಲ್ಲಿ ಗ್ರಾಮೀಣಾ ಮಹಿಳೆಯರಿಗಾಗಿ ಗ್ರಾಪಂ ಆವರಣದಲ್ಲಿಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಪ್ರತಿಯೊಬ್ಬ ಮನುಷ್ಯನು ಸದೃಢ ದೇಹದ ಆರೋಗ್ಯವನ್ನು ಕಾಪಾಡಿ ಕೊಳ್ಳುವುದುಮುಖ್ಯವಾಗಿದೆ. ಮಹಿಳೆಯರು ತಮ್ಮ ಕುಟುಂಬದಕೆಲಸ ಕಾರ್ಯಗಳಲ್ಲಿ ಹೆಚ್ಚಾಗಿ ಶ್ರಮಿಸುವುದರಿಂದತಮ್ಮ ವೈಯುಕ್ತಿಕ ಆರೋಗ್ಯದ ಮೇಲೆ ಹೆಚ್ಚಿನ ಗಮನನೀಡುವುದಿಲ್ಲ. ಪ್ರಾಕೃತಿಕವಾಗಿ ಅವರ ದೇಹದಲ್ಲಿಉಂಟಾಗುವ ಬದಲಾವಣೆಗಳನ್ನು ಗಮನಿಸಿದೇ ಹಾಗೂ ತಜ್ಞ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲುಸಂಕೋಚ ಪಟ್ಟು ಅನೇಕ ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ.

ಆದ್ದರಿಂದ ಮಹಿಳೆಯರು ತಮ್ಮ ಋತು ಸ್ರಾವದಲ್ಲಿ ಉಂಟಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿಗಮನಿಸಿ ಯಾವುದೇ ರೀತಿಯ ತೊಂದರೆಗಳುಆಕಸ್ಮಾತ್‌ ಕಂಡು ಬಂದಲ್ಲಿ ತಮ್ಮಲ್ಲಿನ ಅಂಜಿಕೆಯನ್ನುಬದಿಗಿಟ್ಟು ಸಕಾಲದಲ್ಲಿ ಪರೀಕ್ಷೆಗೆ ಒಳಗಾಗಿ ಸೂಕ್ತಚಿಕಿತ್ಸೆಗಳನ್ನು ಪಡೆದುಕೊಂಡರೇ ಆರಂಭಿಕ ಹಂತದಲ್ಲಿಯೇ ಅನೇಕ ಕಾಯಿಲೆಗಳಿಂದ ದೂರವಿರಲುಸಾಧ್ಯವಾಗುತ್ತದೆ, ಆದ್ದರಿಂದ ಮಹಿಳೆಯಲ್ಲಿ ಜಾಗೃತಿಮೂಡಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ ಆಗಲಿದೆ ಎಂದು ಹೇಳಿದರು.

ಜೆ.ಸಿ.ಪುರ ಸಮುದಾಯ ಆರೋಗ್ಯ ಕೇಂದ್ರದದಂತ ವೈದ್ಯೆ ಡಾ.ಸೆಲ್ವಿ ಮಾತನಾಡಿ, ಮನುಷ್ಯನಿಗೆ ಅತ್ಯಂತ ಆಕರ್ಷಣೆಯಾಗಿರುವ ದಂತಪಕ್ತಿಗಳ ಸಂರಕ್ಷಣೆ ನಮ್ಮಗಳ ಹೊಣೆಯಾಗಿದೆ. 32 ಹಲ್ಲುಗಳುತಮ್ಮದೇ ನಿರ್ದಿಷ್ಟ ಕಾರ್ಯವನ್ನು ನಿರ್ವಸುತ್ತವೆ ಆಕಸ್ಮಾತ್‌ ಒಂದು ಹಲ್ಲು ಕಳೆದು ಕೊಂಡರು ವಿವಿಧರೀತಿಯ ಸಮಸ್ಯೆಗಳು ಕಾಡುತ್ತವೆ. ಆದ್ದರಿಂದ ಪ್ರತಿಯೊಬ್ಬರು ಎಚ್ಚರಿಕೆಯಿಂದ ಹಲ್ಲಿನ ರಕ್ಷಣೆಗೆಆದ್ಯತೆ ನೀಡಬೇಕು. ಸ್ವಲ್ಪವೇ ಪೆಸ್ಟ್‌ ಹಾಗೂ ಸ್ವಲ್ಪವೇಸಮಯ ಬಳಕೆ ಮಾಡಿಕೊಳ್ಳುವ ಮೂಲಕ ಪ್ರತಿದಿನಎರಡು ಬಾರಿ ಹಲ್ಲುಗಳ ಸ್ವತ್ಛತೆಗೆ ಆದ್ಯತೆ ನೀಡಬೇಕೆ ಹೊರತು ನಿರ್ಲಕ್ಷ್ಯ ಮಾಡುವುದರಿಂದ ಹುಳುಕುಹಲ್ಲಿನ ಸಮಸ್ಯೆ ಜೊತೆಗೆ ವಸಡು ಸಮಸ್ಯೆಉಂಟಾಗುವ ಸಾಧ್ಯತೆಗಳು ಹೆಚ್ಚಾಗುತ್ತದೆ ಎಂದರು.

ಬಾಣಾವರ ಪ್ರಾಥಮಿಕ ಆರೋಗ್ಯ ಕೇಂದ್ರದಡಾ.ಗೀತಾ ಮಾತನಾಡಿ, ಮಹಿಳೆಯರಲ್ಲಿ ವಯೋಸಹಜ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ.ಋತುಚಕ್ರದಲ್ಲಿ ಸಂದರ್ಭದಲ್ಲಿ ಸಮಸ್ಯೆಗಳು ಕೆಲವರಿಗೆ ಸಹಜವಾಗಿದ್ದರು, ಅವರ ದೇಹದವೈಯುಕ್ತಿಕ ಸ್ವತ್ಛತೆ ಕೊರತೆಯಿಂದ ಮಾರಣಾಂತಿಕರೋಗಗಳಿಗೆ ತುತ್ತಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.

Advertisement

ಗ್ರಾಪಂ ಅಭಿವೃದ್ಧಿ ಅಧಿಕಾರಿ ವೇದಾವತಿ ಮಾತನಾಡಿ, ಗ್ರಾಮೀಣಾ ಭಾಗದ ಮಹಿಳೆಯರಿಗೆ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆರೋಗ್ಯ ಇಲಾಖೆ ಸಹಯೋಗ ದೊಂದಿಗೆಆಯೋಜಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. ಗ್ರಾಪಂ ಅಧ್ಯಕ್ಷೆ ಲಲಿತಮ್ಮ ಚಿಕ್ಕೇಗೌಡ, ಡಾ.ರಶ್ಮಿ, ಡಾ.ಸಹನಾ, ಚುನಾಯಿತ ಗ್ರಾಪಂ ಸದಸ್ಯರು,ಆರೋಗ್ಯ ಇಲಾಖೆ ನಿರೀಕ್ಷಕರು, ಸಿಬ್ಬಂದಿ ವರ್ಗ,ಆಶಾ ಕಾರ್ಯಕರ್ತೆಯರು, ಎನ್‌ಸಿಡಿ ತಂಡದವರುಹಾಗೂ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು, ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next