ಕೊಟ್ಟಿಗೆಹಾರ: ಮೂಡಿಗೆರೆಯ ಲಯನ್ಸ್ ಕ್ಲಬ್ ಉತ್ತಮ ಸೇವಾ ಕಾರ್ಯ ಮಾಡುತ್ತಿದೆ. ಸೇವೆ ಮತ್ತು ಸಾಂಗತ್ಯ ಲಯನ್ಸ್ನ ಮುಖ್ಯ ಧ್ಯೇಯವಾಗಿದೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ ಹೇಳಿದರು.
ಅವರು ಬಣಕಲ್ ವಿಮುಕ್ತಿ ಸೇವಾ ಕೇಂದ್ರದಲ್ಲಿ ಉಚಿತ ಕನ್ನಡಕ ಹಾಗೂ ಕ್ರೀಡಾ ಸಾಮಾಗ್ರಿ ವಿತರಣಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ‘ಸಮಾಜ ಸೇವೆ ಮಾಡಲು ಲಯನ್ಸ್ ಕ್ಲಬ್ ಉತ್ತಮ ವೇದಿಕೆಯಾಗಿದೆ. ಕೋವಿಡ್ ಇದ್ದರೂ ಲಯನ್ಸ್ ತನ್ನ ಅವದಿಯಲ್ಲಿ ಸೇವಾ ಕಾರ್ಯ ಮಾಡುತ್ತಾ ಬಂದಿದೆ. ಗ್ರಾಮೀಣ ಭಾಗದಲ್ಲಿ ಉತ್ತಮ ಕೃಷಿಗೆ ಸನ್ಮಾನ, ಕ್ರೀಡೆಗೆ ಆಧ್ಯತೆ, ವೈದ್ಯಕೀಯ ಸೇವೆಗೆ ಪುರಸ್ಕಾರದಂತಹ ಕಾರ್ಯವನ್ನು ಸಂಸ್ಥೆ ಸಂಕಷ್ಟ ಸಮಯದಲ್ಲೂ ಮಾಡಿಕೊಂಡು ಬಂದಿರುವುದು ಮೂಡಿಗೆರೆ ಲಯನ್ಸ್ ಅಧ್ಯಕ್ಷರ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ’ ಎಂದರು.
ಮೂಡಿಗೆರೆ ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಎಲ್.ರಂಗನಾಥ್‌ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ’ ತಾಲ್ಲೂಕಿನಿಂದ ಗ್ರಾಮೀಣ ಭಾಗದ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯದಲ್ಲಿ ನಾವು ತೊಡಗಿದ್ದು, ಸೇವಾ ಮನೋಭಾವದ ಎಲೆ ಮರೆಯ ಪ್ರತಿಭೆಗಳಿಗೆ ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದೆ. ಸಂಸ್ಥೆಯಿಂದ ನೇತ್ರದಾನ ಮತ್ತು ಹಲವು ಸಾಮಾಜಿಕ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ಆಯೋಜಿಸುವ ಆಲೋಚನೆಯಿದೆ ಎಂದರು.
ಕಾರ್ಯಕ್ರಮದಲ್ಲಿ ಪಿ.ವಾಸುದೇವ್ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ, ವನಶ್ರೀಲಕ್ಷö್ಮಣ್‌ಗೌಡ ಅವರಿಗೆ ಉತ್ತಮ ಮಹಿಳಾ ರೈತ ಪ್ರಶಸ್ತಿ, ಗ್ರಾಮೀಣ ಭಾಗದಲ್ಲಿ ಹಲವು ವರ್ಷಗಳ ವೈದ್ಯಕೀಯ ಸೇವೆಗೆ ಡಾ. ಎ.ಯೂ.ಪಾದೂರು ಅವರನ್ನು ಹಲವು ವರ್ಷಗಳ ಸೇವಾ ಕಾರ್ಯಕ್ಕಾಗಿ ಸನ್ಮಾನಿಸಲಾಯಿತು. ಕ್ಯಾನ್ಸರ್ ಪೀಡಿತೆ ಗೀತಾ ಅವರಿಗೆ ರೂ೫ ಸಾವಿರ ನೆರವಿನ ಚೆಕ್ ಅನ್ನು ರಾಜ್ಯಪಾಲರು ವಿತರಿಸಿದರು. ಕೊಟ್ಟಿಗೆಹಾರ, ಬಣಕಲ್ ಸರ್ಕಾರಿ ಪ್ರೌಢಶಾಲೆ,ಏಕಲವ್ಯ ಶಾಲೆಗೆ ಕ್ರೀಡಾ ಸಾಮಾಗ್ರಿಗಳನ್ನು ಲಯನ್ಸ್ ಸಂಸ್ಥೆಯಿAದ ವಿತರಿಸಲಾಯಿತು.ವಿಮುಕ್ತಿ ಸದಸ್ಯರಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷ ಗೋಪಾಲಗೌಡ, ಕಾರ್ಯದರ್ಶಿ ಶಶಿಧರ್ ರ‍್ಲ, ಸಂಯೋಜಕಿ ಭಾರತಿ, ಗೋವರ್ಧನ್ ಶೆಟ್ಟಿ, ಸುಪ್ರೀತಾ ಶೆಟ್ಟಿ, ಸಾಹಿತಿ ಹಳೇಕೋಟೆ ರಮೇಶ್, ಜಯಕುಮಾರ್, ಯು.ಇ. ಪ್ರಭಾಕರ್, ಸಿಪ್ರಿಯನ್ ಲೋಬೊ, ಸುಂದರೇಶ್, ವಿಮುಕ್ತಿಯ ವಿಂದ್ಯಾ ಯೋಗೀಶ್, ದಿವ್ಯಾ ಡಿಸೋಜ ಹಾಗೂ ವಿಮುಕ್ತಿ ಮಹಿಳಾ ಒಕ್ಕೂಟದ ಸದಸ್ಯರು ಇದ್ದರು.
ಚಿತ್ರ:೧೪ಕೆಟಜಿ೨ ಬಣಕಲ್ ವಿಮುಕ್ತಿ ಸೇವಾ ಕೇಂದ್ರದಲ್ಲಿ ಮೂಡಿಗೆರೆ ಲಯನ್ಸ್ ಕ್ಲಬ್ ವತಿಯಿಂದ ಉಚಿತ ಕನ್ನಡಕ ವಿತರಣೆ ಹಾಗೂ ಕ್ರೀಡಾ ಪರಿಕರ ವಿತರಣೆ ಕಾರ್ಯಕ್ರಮವನ್ನು ಲಯನ್ಸ್ ಜಿಲ್ಲಾ ಗೌವರ್ನರ್ ವಸಂತ ಕುಮಾರ ಶೆಟ್ಟಿ ಉದ್ಘಾಟಿಸಿದರು.