Advertisement

ಉಚಿತ ವಿದ್ಯುತ್ ಯೋಜನೆ: ಸುತ್ತೋಲೆ ಪರಿಷ್ಕರಣೆ ಮಾಡಿದ ಸರ್ಕಾರ

09:54 AM Sep 05, 2022 | Team Udayavani |

ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪಂಗಡದ ಬಿಪಿಎಲ್ ಕಾರ್ಡ್ ಕುಟುಂಬಗಳಿಗೆ ರಾಜ್ಯ ಸರಕಾರ ಘೋಷಿಸಿದ್ದ 75 ಯುನಿಟ್ ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ಇನ್ನಷ್ಟು ಸರಳಗೊಳಿಸಲು ಸರಕಾರ ನಿರ್ಧರಿಸಿದ್ದು, ಈ ಸಂಬಂಧ ಹೊರಡಿಸಿದ್ದ ಸುತ್ತೋಲೆಯನ್ನು ಮಾತ್ರ ವಾಪಾಸ್ ಪಡೆಯಲಾಗಿದೆ.

Advertisement

ಈ ಯೋಜನೆಗೆ ಫಲಾನುಭವಿಗಳ ಆಯ್ಕೆಗಾಗಿ ಆಗಸ್ಟ್ 24 ರಂದು ಮಾನದಂಡಗಳನ್ನು ರೂಪಿಸಿ ಆದೇಶ ಹೊರಡಿಸಲಾಗಿತ್ತು. ಆದರೆ ಈ ಪೈಕಿ‌ ಕೆಲ‌ ನಿಯಮಗಳು ಕಠಿಣವಾಗಿದ್ದರಿಂದ ಇಡೀ ವ್ಯವಸ್ಥೆಯನ್ನು ಸರಳಗೊಳಿಸಲು ಆಗಸ್ಟ್ 24ರಂದು ಹೊರಡಿಸಿದ್ದ ಸುತ್ತೋಲೆ ವಾಪಾಸ್ ತೆಗೆದುಕೊಳ್ಳಲಾಗಿದೆ ಎಂದು ಇಂಧನ ಇಲಾಖೆ ಸ್ಪಷ್ಟಪಡಿಸಿದೆ.

ಇದನ್ನೂ ಓದಿ:ಕುಂದಾಪುರ : ಅಕ್ರಮ ಗಣಿಗಾರಿಕೆ ಅಡ್ಡೆಗೆ ದಾಳಿ : 4ಲಾರಿ, 8 ಮೆ.ಟನ್‌ ಮರಳು, ಕೆಂಪು ಕಲ್ಲು ವಶ

ಅರ್ಹ ಫಲಾನುಭವಿ ತಾನು ವಾಪವಿರುವುದಕ್ಕೆ ಅಗತ್ಯ ದಾಖಲೆ, ಗ್ರಾಹಕರ ಐಡಿ ಸಂಖ್ಯೆ, ಬಾಡಿಗೆ ಅಥವಾ ಲೀಸಿನ ಕರಾರು ಪತ್ರದ ಜತೆಗೆ 250 ಯುನಿಟ್‌ಗಿಂತ ಹೆಚ್ಚು ವಿದ್ಯುತ್ ವ್ಯಯಿಸಿರಬಾರದು ಎಂದು ಹೇಳಲಾಗಿತ್ತು. ಇದರೊಂದಿಗೆ ಇನ್ನಷ್ಟು ದಾಖಲೆಗಳನ್ನು ನೀಡಬೇಕಾಗಿದ್ದರಿಂದ ಹಲವರಿಗೆ ಸಮಸ್ಯೆಯಾಗಿತ್ತು. ಇದನ್ನು ಗಮನಿಸಿದ ಇಂಧನ ಸಚಿವ ವಿ.ಸುನೀಲ್ ಕುಮಾರ್ ನಿಯಮಾವಳಿ ಸರಳಗೊಳಿಸುವಂತೆ ಸೂಚನೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next