ಚಿಂಚೋಳಿ: ಪಟ್ಟಣದ ಸರ್ಕಾರಿ ಸಾರ್ವಜನಿಕ ಅಸ್ಪತ್ರೆಯಲ್ಲಿ ರಾಷ್ಟ್ರೀಯ ದಂತ ಆರೋಗ್ಯ ಕಾರ್ಯಕ್ರಮದಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಉಚಿತ ದಂತ ಆರೋಗ್ಯ ತಪಾಸಣೆ ಚಿಕಿತ್ಸಾ ಶಿಬಿರ ಜರುಗಿತು.
ತಾಲೂಕು ಆರೋಗ್ಯಾಧಿಕಾರಿ ಡಾ| ಮಹ್ಮದ್ ಗಫಾರ ಅಹೆಮದ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಜನರು ಉಚಿತ ದಂತ ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಎನ್.ಒ.ಎಚ್.ಪಿ ಕಾರ್ಯಕ್ರಮ ಅಧಿಕಾರಿ ಡಾ| ಸಂಧ್ಯಾ ಕಾನೇಕರ ಮಾತನಾಡಿ, ಆರೋಗ್ಯ ಇಲಾಖೆ ಜನರಿಗೆ ಹಲ್ಲುಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಎಂದರು.
ಡಾ| ಸಂಜಯ ಗೋಳೆ, ಡಾ| ಅನಿಲ ಕುಮಾರ, ಡಾ| ಲೋಕೇಶ ಕುಮಾರ, ಡಾ| ಬಾಲಾಜಿರಾವ್ ಪಾಟೀಲ ಕುಂಚಾವರಂ, ಡಾ| ರಾಜೇಶ್ವರಿ, ದಂತ ವೈದ್ಯೆ ಡಾ| ದೀಪಾ, ಡಾ| ವೈಶಾಲಿ, ಡಾ| ಫಾತಿಮಾ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಉಮಾಕಾಂತ ಬೆಳಕೇರಿ, ಪವನಕುಮಾರ ಗೋಪೇನಪಳ್ಳಿ, ಅಭಿಷೇಕ ಮಲ್ಲೆನೋರ ಇನ್ನಿತರರಿದ್ದರು.
ಒಟ್ಟು 222 ಜನರಿಗೆ ದಂತ ಪರೀಕ್ಷೆ ನಡೆಸಲಾಯಿತು. 102 ಜನರಿಗೆ ದಂತಭಾಗ್ಯ ಯೋಜನೆ ಅಡಿಯಲ್ಲಿ ದಂತ ಅಳವಡಿಸಲು ಶಿಫಾರಸು ಮಾಡಲಾಯಿತು. ಆಸ್ಪತ್ರೆ ಆಡಳಿತಾಧಿಕಾರಿ ಮಕ್ಕಳ ತಜ್ಞ ಡಾ| ಸಂತೋಷ ಪಾಟೀಲ ಸ್ವಾಗತಿಸಿದರು, ಹಣಮಂತ ಭೋವಿ ವಂದಿಸಿದರು.