Advertisement

ಇಂದಿನಿಂದ 25 ಸಾವಿರ ಲೀ. ಹಾಲು ಉಚಿತ ವಿತರಣೆ

12:51 PM Apr 04, 2020 | Suhan S |

ಹಾಸನ: ಜಿಲ್ಲೆಯಲ್ಲಿ ಅಧಿಸೂಚಿತ ಹಾಗೂ ಗುರುತಿಸಲ್ಪಟ್ಟ ಕೊಳಗೇರಿಗಳ ನಿವಾಸಿಗಳು ಹಾಗೂ ಕಟ್ಟಡ ಕಾರ್ಮಿಕರ ಕುಟುಂಬಗಳಿಗೆ ಶನಿವಾರದಿಂದ ಏ.14 ರವರೆಗೆ ಉಚಿತವಾಗಿ 25 ಸಾವಿರ ಲೀ. ಹಾಲು ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ತಿಳಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ಹಾಲು ವಿತರಿಸಲು ಸೂಚಿಸಲಾಗಿದ್ದು, ಪ್ರತಿ ತಾಲೂಕುಗಳಲ್ಲಿ ತಹಶೀಲ್ದಾರ್‌ರ ನೇತೃತ್ವದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು ಹಾಗೂ ಮುಖ್ಯಾಧಿಕಾರಿಗಳು ಇದರ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಲೋಪವಿಲ್ಲದಂತೆ ವಿತರಣೆ ಮಾಡಬೇಕು ಎಂದು ಸೂಚಿಸಿದ್ದಾರೆ.

ತಾಲೂಕುವಾರು ಒಟ್ಟು 29ಸಾವಿರ ಲೀ.ಗೆ ಬೇಡಿಕೆ ಸಲ್ಲಿಸಲಾಗಿದೆ. ಆದರೆ ಜಿಲ್ಲೆಗೆ 25 ಸಾವಿರ ಲೀ. ಹಾಲು ವಿತರಣೆಯ ಗುರಿ ನಿಗದಿ ಪಡಿಸಲಾಗಿದ್ದು, ಬೆಳಗ್ಗೆ 6 ಗಂಟೆ ಒಳಗೆ ಹಾಲು ಪೂರೈಕೆಯಾಗಲಿದ್ದು 8 ಗಂಟೆ ಒಳಗೆ ಅದನ್ನು ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಅರಸಿಕೆರೆ 4,050 ಲೀ., ಅರಕಲಗೂಡು 2,750ಲೀಟರ್‌. ಆಲೂರು 900 ಲೀ. ಬೇಲೂರು – 3,500 ಲೀ. ಚನ್ನರಾಯಪಟ್ಟಣ 3,300 ಲೀ. ಹಾಸನ 6,300 ಲೀ. ಹೊಳೆ ನರಸೀಪುರ 3,000 ಲೀ. ಹಾಗೂ ಸಕಲೇಶಪುರ ತಾಲೂಕಿಗೆ 1,200 ಲಿಟರ್‌. ಹಾಲು ಉಚಿತವಾಗಿ ವಿತರಣೆ ಮಾಡಲು ರವಾನೆಯಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next