Advertisement

ಜಿಎಸ್‌ಬಿ ಸಭಾ ದಹಿಸರ್‌-ಬೊರಿವಲಿ: ಉಚಿತ ಕೋವಿಡ್‌ ಲಸಿಕೆ ಶಿಬಿರ

12:36 PM Jul 07, 2021 | Team Udayavani |

ಮುಂಬಯಿ: ಜಿಎಸ್‌ಬಿ ಸಭಾ ದಹಿಸರ್‌-ಬೊರಿವಲಿ ಸಂಸ್ಥೆಯಿಂದ ಸಾರ್ವ ಜನಿಕರಿಗಾಗಿ ಉಚಿತ ಕೋವಿಡ್‌ ಲಸಿಕೆ ಶಿಬಿರವು ಜು. 4ರಂದು ದಹಿಸರ್‌ ಪೂರ್ವದ ವಿದ್ಯಾ ಮಂದಿರ ಶಾಲಾ ಸಭಾಗೃಹದಲ್ಲಿ  ನಡೆಯಿತು.

Advertisement

ಜಾಗತಿಕವಾಗಿ ಕೋವಿಡ್‌ ಪರಿಸ್ಥಿತಿಯನ್ನು ಗಮನದಲ್ಲಿರಿಸಿ ಈ ಮಹಾಮಾರಿಯು ಶೀಘ್ರವೇ ಕೊನೆಯಾಗುವಂತೆ ಪ್ರಾರ್ಥಿಸಿ ಕುಲಗುರು ದೈವಕ್ಯ ಶ್ರೀಮದ್‌ ಸುಧೀಂದ್ರ ತೀರ್ಥ ಸ್ವಾಮೀಜಿಗಳ ಕೃಪೆ ಮತ್ತು ಶ್ರೀ ಸಂಸ್ಥಾನ ಕಾಶೀ ಮಠ ವಾರಣಾಸಿ ಕಾಶೀ ಮಠಾಧೀಶ ಶ್ರೀಮದ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಅನುಗ್ರಹದೊಂದಿಗೆ ಜಿಎಸ್‌ಬಿ ಸಭಾ ದಹಿಸರ್‌ – ಬೊರಿವಲಿ ಅಧ್ಯಕ್ಷ ಎಂ. ಉದಯ ಪಡಿಯಾರ್‌, ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸ ಲಾಗಿತ್ತು.  ಸ್ಥಾನೀಯ ಮಾಜಿ ಶಾಸಕ ವಿನೋದ್‌ ಘೊಸಾಳ್ಕರ್‌ ಮತ್ತು ದಹಿಸರ್‌ ಕಾರ್ಪೊರೇಟರ್‌ ಜಗದೀಶ್‌ ಓಜಾ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನೆಮ್ಮದಿಯಿಂದ ಬಾಳುವಂತಾಗಲಿ

ಕುಲದೇವರು, ಶ್ರೀ ಕಾಶೀ ಮಠದ ಶ್ರೀ ವಿಟuಲ ರುಖುಮಾಯಿ ಮತ್ತು ಪರಿವಾರ ದೇವತೆಗಳಿಗೆ ಶಿವಾನಂದ ಭಟ್‌ ಪೂಜೆ ನೆರವೇರಿಸಿ ಎಲ್ಲರೂ ನೆಮ್ಮದಿಯಿಂದ ಬಾಳು ವಂತಾಗಲಿ. ಯೋಗಕ್ಷೇಮಕ್ಕಾಗಿ ಹರಿ ಗುರುವಿನ ಪಾದಾರವಿಂದಕ್ಕೆ ನಾವೆಲ್ಲರೂ ಪ್ರಾರ್ಥಿಸೋಣ ಎಂದು ಎಂದು ತಿಳಿಸಿದರು.

ಜಿಎಸ್‌ಬಿ ಸಮಾಜದ ಹಿತೈಷಿಗಳು, ದಾನಿಗಳು, ಪ್ರಾಯೋಜಕರು ಮತ್ತು ಸಾರ್ವಜನಿ ಕರ ಸಹಯೋಗದೊಂದಿಗೆ ನಡೆಸಲ್ಪಟ್ಟ ಕಾರ್ಯ ಕ್ರಮದಲ್ಲಿ ಸಭಾದ ಸ್ವಯಂ ಸೇವಕರು ನಿಸ್ವಾರ್ಥ ಸೇವೆಗೈದರು. ಸರಕಾರ, ಬಿಎಂಸಿ ಮತ್ತು ಮತ್ತಿತರ ಇಲಾಖೆಗಳ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು ಎಂದು ಎಂದು ಜಿಎಸ್‌ಬಿ ಸಭಾ ದಹಿಸರ್‌-ಬೊರಿವಲಿ ಉಪಾಧ್ಯಕ್ಷ ಸಾಣೂರು ಮನೋಹರ್‌ ವಿ. ಕಾಮತ್‌ ತಿಳಿಸಿ ಸರ್ವರಿಗೂ ಶುಭ ಹಾರೈಸಿದರು.

Advertisement

ಸುರಾನಾ ಗ್ರೂಪ್‌ ಆಫ್‌ ಹಾಸ್ಪಿಟಲ್ಸ್‌ ತಂಡದ ವೈದ್ಯರು ಮತ್ತು ದಾದಿಯರು ಲಸಿಕೆ ಹಾಕಲು ಸಹಕರಿಸಿದರು. ಜಿ. ಎಸ್‌. ಬಿ. ಸಭಾ ದಹಿಸರ್‌- ಬೊರಿವಲಿ ಗೌರವ ಪ್ರಧಾನ ಕಾರ್ಯದರ್ಶಿ ವಿಷ್ಣು ಆರ್‌. ಕಾಮತ್‌, ಗೌರವ ಕೋಶಾಧಿಕಾರಿ ಮೋಹನ್‌ ಎ. ಕಾಮತ್‌, ಜತೆ ಕಾರ್ಯದರ್ಶಿ ಗುರುಪ್ರಸಾದ್‌ ಪೈ, ಜತೆ ಕೋಶಾಧಿಕಾರಿ ಪ್ರಭಾಕರ್‌ ಕಾಮತ್‌ ಮತ್ತಿತರ ಪದಾಧಿಕಾರಿಗಳು, ಸದಸ್ಯರು, ಸೇವಾಕರ್ತರು ಉಪಸ್ಥಿತರಿದ್ದರು.

ಚಿತ್ರವರದಿ : ರೋನ್ಸ್ಬಂಟ್ವಾಳ್

Advertisement

Udayavani is now on Telegram. Click here to join our channel and stay updated with the latest news.

Next