ಬೆಂಗಳೂರು:ದಯಾನಂದಸಾಗರ್‌ಸಂಸ್ಥೆಯಿಂದಸಿಇಟಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವಉಚಿತ ಆನ್‌ಲೈನ್ ತರಗತಿಗೆ ಉಪಮುಖ್ಯಮಂತ್ರಿಯೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಚಾಲನೆ ನೀಡಿದರು.
ಶುಕ್ರವಾರ ಮಲ್ಲೇಶ್ವರದ 18ನೇ ಅಡ್ಡರಸ್ತೆಯಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ನಡೆದಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ದಯಾನಂದ ಸಾಗರ್ ಸಂಸ್ಥೆಯ ಈ ಕಾರ್ಯವುಸಿಇಟಿ ಬರೆಯಲಿರುವ ಅಭ್ಯರ್ಥಿಗಳಿಗೆ ಹೆಚ್ಚುಅನುಕೂಲವಾಗಲಿದೆ.
ಆನ್‌ಲೈನ್ ಮೂಲಕ ಸೂಕ್ತಹಾಗೂ ಸಮರ್ಥ ರೀತಿಯಲ್ಲಿ ತರಗತಿ ನೀಡಲಿವೆಎಂಬ ವಿಶ್ವಾಸ ವ್ಯಕ್ತಪಡಿಸಿದರು.ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿಬರೆಯಲಿರುವ ಅಭ್ಯರ್ಥಿಗಳಿಗೆ ಆನ್‌ಲೈನ್‌ಮೂಲಕ ನುರಿತ ಉಪನ್ಯಾಸಕರ ಮೂಲಕ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರವಿಷಯದ ತರಗತಿಯನ್ನು ಆನ್‌ಲೈನ್ ಮೂಲಕದಯಾನಂದ ಸಾಗರ್ ಸಂಸ್ಥೆ ನೀಡಲಿದೆ.
2020ಮತ್ತು 2021ರಲ್ಲಿ ಕೊರೊನಾ ಹಿನ್ನೆಲೆಯಲ್ಲಿದ್ವಿತೀಯ ಪಿಯುಸಿ ಭೌತಿಕ ತರಗತಿಗಳನ್ನುಎದುರಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಈತರಗತಿ ಹೆಚ್ಚು ಅನುಕೂಲವಾಗಲಿದೆ. ರಾಜ್ಯ ಎಲ್ಲಭಾಗದ ವಿದ್ಯಾರ್ಥಿಗಳು ಈ ಸೌಲಭ್ಯಪಡೆಯಬಹುದು.ಸಿಇಟಿಯಲ್ಲಿ ಉತ್ತಮ ರ್‍ಯಾಂಕ್ ಪಡೆಯಲುದಯಾನಂದ್ ಸಾಗರ್ ಶಿಕ್ಷಣ ಸಂಸ್ಥೆ ನೀಡುವಆನ್‌ಲೈನ್ ತರಗತಿಗಳು ವಿದ್ಯಾರ್ಥಿಗಳಿಗೆ ಹೆಚ್ಚುಉಪಯೋಗವಾಗಲಿದೆ.
ಮಾಹಿತಿ ಹಾಗೂನೋಂದಣಿಗೆ ಡಿಡಿಡಿ.ಛಚyಚnಚnಛಚsಚಜಚr.ಛಿಛu ಸಂಪರ್ಕಿಸಬಹುದು ಎಂದು ದಯಾನಂದಸಾಗರ್ ಶಿಕ್ಷಣ ಸಂಸ್ಥೆ ತಿಳಿಸಿದೆ.ದಯಾನಂದ ಸಾಗರ್ ವಿಶ್ವವಿದ್ಯಾಲಯದಸಮಕುಲಪತಿ ಹಾಗೂ ದಯಾನಂದ ಸಾಗರ್‌ಸಂಸ್ಥೆಯ ಹಿರಿಯ ಕಾರ್ಯಕಾರಿ ಉಪಾಧ್ಯಕ್ಷಆರ್.ಜನಾರ್ದನ ಇದ್ದರು.