ಮಾಗಡಿ: ಸೇವಾ ಮನೋಭಾವದಿಂದ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಲ್ಲ ಎಂದು ಶಾಸಕ ಎ. ಮಂಜುನಾಥ್ ಸ್ಪಷ್ಟಪಡಿಸಿದರು.
ಪಟ್ಟಣದ ವಾಸವಿ ವಿದ್ಯಾನಿಕೇತನ ಶಾಲೆಯಲ್ಲಿ ಭಾನುವಾರ ಎ.ಮಂಜು ಚಾರಿಟಬಲ್ ಟ್ರಸ್ಟ್ ಮತ್ತು ಕರ್ನಾಟಕ ಕ್ಯಾನ್ಸರ್ ಸಂಸ್ಥೆ ಹಾಗೂ ನಿರಾಮಯ್ ಹೆಲ್ತ್ ಸಂಸ್ಥೆಯು ವಾಸವಿ ವಿದ್ಯಾನಿಕೇತನ ಶಾಲೆ ಸಹಯೋಗದಲ್ಲಿ ನಡೆದ ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಇತ್ತೀಚೆಗೆ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಬರ್ತ್‌ಡೇ ಪ್ರಯುಕ್ತ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಮ್ಮಿಕೊಂಡಿ ದ್ದಾರೆ ಎಂದು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಪ್ರತಿ ತಿಂಗಳು ಆರೋಗ್ಯ ಶಿಬಿರ: ಪ್ರತಿ ತಿಂಗಳು ಎರಡು ಕಡೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಒಂದು ಶಿಬಿರ ಮತ್ತೂಂದು ಹೋಬಳಿ ಮಟ್ಟದ ಗ್ರಾಮೀಣ ಪ್ರದೇಶದಲ್ಲಿ ನಡೆಸಲಾಗುತ್ತಿದೆ. ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡು ಆರೋಗ್ಯವಂತರಾಗಿರಬೇಕು ಎಂಬುದು ನಮ್ಮ ಟ್ರಸ್ಟ್‌ನ ಧ್ಯೇಯವಾಗಿದೆ ಎಂದರು.
ಮೊದಲು ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಶಿಬಿರದಲ್ಲಿ ತಪಾಸಣೆ ಮಾಡಿಸಲು ಕಾರ್ಯಕ್ರಮ ರೂಪಿಸಲಾಗಿದ್ದು, ಅವರ ಪ್ರಯೋಜನ ಪಡೆದುಕೊಂಡು ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು, ಮಹಿಳೆಯರಲ್ಲಿ ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ ಸೋಂಕು ಪತ್ತೆ ಮಾಡಿಸಿಕೊಳ್ಳುವಂತೆ ಅರಿವು ಮೂಡಿಸುವ ಮೂಲಕ ಜಾಗೃತಿ ಮೂಡಿಸಿ, ಅವರಲ್ಲಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸ ಹೊಂದಿದ್ದೇವೆ. ಇದಕ್ಕೆ ಸಿಡಿಪಿಒ ಅಧಿಕಾರಿ ಸುರೇಂದ್ರ ಸಾಥ್ ನೀಡಿದ್ದಾರೆ ಎಂದು ಹೇಳಿದರು.
ಕ್ಯಾನ್ಸರ್ ಮುಕ್ತಕ್ಕೆ ಶಾಸಕರ ಸೇವೆ ಅನನ್ಯ: ನಿರಾಮಯ್ ಹೆಲ್ತ್ ಸಂಸ್ಥೆಯ ಡಾ.ಲಕ್ಷ್ಮೀ ಮಾತನಾಡಿ, ಕಳೆದ ತಿಂಗಳು ಸುಮಾರು 450 ಮಹಿಳೆಯರು ಸ್ತನ ಮತ್ತು ಗರ್ಭಕೋಶದ ಸೋಂಕಿಗೆ ಸಂಬಂಧಿಸಿದಂತೆ ತಪಾಸಣೆ ಮಾಡಿಸಿಕೊಂಡಿದ್ದರು. ಈಪೈಕಿ 17 ಮಂದಿ ಮಹಿಳೆಯರಲ್ಲಿ ಸೋಂಕುಕಂಡು ಬಂದಿದೆ. ಈಗ ಅವರು ಹೆದರುವ ಅಗತ್ಯವಿಲ್ಲ. ಏಕೆಂದರೆ ಅವರಿಗೆ ನಾವು ಶೀಘ್ರದಲ್ಲಿಯೇ ಸೂಕ್ತ ಚಿಕಿತ್ಸೆ ನೀಡುವುದರಿಂದ ಕ್ಯಾನ್ಸರ್ ಸೋಂಕಿನಿಂದ ಮುಕ್ತರಾಗಲಿದ್ದಾರೆ. ಆದ್ದರಿಂದಲೇ ಶೀಘ್ರ ತಪಾಸಣೆಯಿಂದ ಕ್ಯಾನ್ಸರ್ ನಾಪತ್ತೆ ಮಾಡಬಹುದು. ಈ ಮೂಲಕ ಮಾಗಡಿ ಕ್ಷೇತ್ರವನ್ನು ಕ್ಯಾನ್ಸರ್ ಮುಕ್ತ ಮಾಗಡಿಯನ್ನಾಗಿಸಲು ಶಾಸಕರ ಸೇವೆ ಅನನ್ಯ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷೆ ಕೆ.ಆರ್. ವಿಜಂಯಲಕ್ಷ್ಮೀ ರೂಪೇಶ್ ಮಾತನಾಡಿ, ಶಿಬಿರದ ಲಾಭವನ್ನು ಪುರ ನಾಗರೀಕರು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಆರೋಗ್ಯವಂತರಾಗಿರಬೇಕು. ಈ ಮೂಲಕ ಆರೋಗ್ಯ ಸಮಾಜದ ನಿರ್ಮಾಣದಲ್ಲಿ ಎಲ್ಲರೂ ಸಹಕರಿಯಾಗಬೇಕಿದೆ ಎಂದು ತಿಳಿಸಿದರು. ಎ.ಮಂಜು ಚಾರಿಬಟಲ್ ಟ್ರಸ್ಟ್ ನ ಕಾರ್ಯದರ್ಶಿ ಹಾಗೂ ರಾಮನಗರ ತಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಪೂಜಾರಿಪಾಳ್ಯದ ಕೆ.ಕೃಷ್ಣಮೂರ್ತಿ, ಡಾ.ರಾಮಪ್ರಸಾದ್, ಡಾ.ನಂದಿತಾ, ಡಾ.ವೆಂಕಟೇಶ್, ತಾಲೂಕು ಆಸ್ಪತ್ರೆಯ ಡಿಎಚ್‌ಒ ಡಾ.ಚಂದ್ರಶೇಖರ್, ಪಂಚಾಕ್ಷರಿ ಹಾಜರಿದ್ದರು.