ಉಡುಪಿ: ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಕಡಿಯಾಳಿ ಹಾಗೂ ಆಸರೆ ಚಾರಿಟೇಬಲ್ ಟ್ರಸ್ಟ್‌ನ ಸಹಕಾರದಲ್ಲಿ ಶಾಸಕ ಕೆ.ರಘುಪತಿ ಭಟ್ ನೇತ್ರತ್ವದಲ್ಲಿ ಜನಪ್ರತಿನಿಧಿಗಳ ಸಹಕಾರದಲ್ಲಿ ಮೇ 25 ರಿಂದ ಮೇ 30 ರ ವರೆಗೆ ನಗರದ 7 ಮಾರ್ಗಗಳಲ್ಲಿ 12 ಉಚಿತ ಸಿಟಿ ಬಸ್‍ಸೇವೆಗೆ ರಾಜ್ಯ ಬಿಜೆಪಿ ಘಟಕಾಧ್ಯಕ್ಷ ದ.ಕ ಸಂಸದ ನಳಿನ್ ಕುಮಾರ್ ಕಟೀಲು ಉಡುಪಿ ಸಿಟಿ ಬಸ್
ನಿಲ್ದಾಣದಲ್ಲಿ ಸೋಮವಾರ ಬೆಳಗ್ಗೆ ಚಾಲನೆ ನೀಡಿದರು.
ಲಾಕ್‍ಡೌನ್ ಸಡಿಲಿಕೆಯಾದ ಬಳಿಕ ಹೆಚ್ಚಿನ ಕಡೆಗಳಲ್ಲಿ ಕೆಲಸ ಕಾರ್ಯಗಳು ಆರಂಭಗೊಂಡಿದ್ದು, ಸಾರಿಗೆ ವ್ಯವಸ್ಥೆ ಇಲ್ಲದೇ ದುಪ್ಪಟ್ಟು ಹಣ ಕೊಟ್ಟು ಕೆಲಸಕ್ಕೆ ಹೋಗಬೇಕಾಗಿದೆ. ಅಲ್ಲದೇ ಸಮೂಹ ಸಾರಿಗೆ ಬಳಸುವುದರಿಂದ ಕೋವಿಡ್ ಹರಡುತ್ತದೆ ಎನ್ನುವ ಭೀತಿಯೂ ಇದೆ. ಇದನ್ನೆಲ್ಲ ದೂರ ಮಾಡುವ ನಿಟ್ಟಿನಲ್ಲಿ ಒಂದು ವಾರಗಳ ಕಾಲ ಉಚಿತ ಬಸ್ ಸೇವೆಯನ್ನು ನೀಡಲು ಸಂಸ್ಥೆಗಳು ನಿರ್ಧರಿಸಿವೆ.
ಬೆಳಗ್ಗೆ 7 ರಿಂದ ಸಂಜೆವರೆಗೆ ಈ ಉಚಿತ ಬಸ್ ಸೇವೆ ಸಿಗಲಿದೆ. ಶಾಸಕ ರಘುಪತಿ ಭಟ್, ಸಿಟಿ ಬಸ್ ಮಾಲಿಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್.ಕರಾವಳಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ,ಜಿ.ಪಂ ಅಧ್ಯಕ್ಷ ದಿನಕರ ಬಾಬು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಸಂತ ಭಟ್ , ಉದಯಕುಮಾರ ಶೆಟ್ಟಿ, ಮಹೇಶ್ ಠಾಕೂರ್ , ಯಶ್ ಪಾಲ್ ಸುವರ್ಣ, ರಾಘವೇಂದ್ರ ಕಿಣಿ ಮೊದಲಾದವರು ಉಪಸ್ಥಿತರಿದ್ದರು.