Advertisement

ಮಹಾ ಚುನಾವಣೆ: ಅಕೊಲಾದಲ್ಲಿ ಉಚಿತ ಆಟೋ ರಿಕ್ಷಾ ಸೇವೆ

10:29 AM Oct 21, 2019 | Team Udayavani |

ಮುಂಬಯಿ: ಮಹಾರಾಷ್ಟ್ರವಿಧಾನಸಭೆಗೆ ಸೋಮವಾರ ನಡೆಯಲಿರುವ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಸರ್ವ ರೀತಿಯಲ್ಲಿ ಸನ್ನದ್ಧಗೊಂಡಿದೆ. ಈಗಾಗಲೇ ಎಲ್ಲಾ ಮತಗಟ್ಟೆಗಳಿಗೆ ಅಧಿಕಾರಿಗಳು ಆಗಮಿಸುತ್ತಿದ್ದು, ಮತಗಟ್ಟೆಯ ಸುತ್ತಲೂ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.

Advertisement

ರಾಜ್ಯದ ಅಕೊಲಾ ಜಿಲ್ಲೆಯಲ್ಲಿ ಅಶಕ್ತರು ಮತ್ತು ಅಂಗವಿಕಲರಿಗಾಗಿ ವಿಶೇಷ ಸೇವೆಯನ್ನು ಅಲ್ಲಿನ ಆಟೋ ರಿಕ್ಷಾ ಚಾಲಕರು ಒದಗಿಸಲಿದ್ದಾರೆ. ದೈಹಿಕ ಅಶಕ್ತರು ಅಥವ ಅಂಗವಿಕಲರ ಮನೆಯಿಂದ ಮತ ಕೇಂದ್ರದ ವರೆಗೆ ಉಚಿತ ಸೇವೆಯನ್ನು ನೀಡಲಾಗುವುದು ಎಂದು ಆಟೋ ಚಾಲಕರು ಘೋಷಿಸಿದ್ದಾರೆ. ಇದಕೆ ಈಗಾಲೇ ಜಿಲ್ಲೆಯ ನಾನಾ ಭಾಗದ ಅಟೋ ಚಾಲಕರು ತಮ್ಮ ರಿಕ್ಷಾದ ಹಿಂದೆ ‘Our one day for the disabled voters’ಎಂಬ ಫ‌ಲಕವನ್ನು ಹಚ್ಚಿ ಮಾಹಿತಿ ನೀಡುತ್ತಿದ್ದಾರೆ.

ಒಂದು ಕರೆಯನ್ನು ಮಾಡುವ ಮೂಲಕ ವಿವಿಧ ಮತಗಟ್ಟೆಯ ವ್ಯಾಪ್ತಿಯಲ್ಲಿರುವ ಅಂಗವಿಕಲರು ಇದರ ಪ್ರಯೋಜನ ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ ಸುಮಾರು 13,602 ಅಂಗವಿಕಲ ಮತದಾರರು ಇದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next