Advertisement

ಕಷ್ಟದಲ್ಲಿದ್ದವರಿಗೆ ಮಿಡಿದ ಹೃದಯಗಳು

08:19 PM May 26, 2021 | Team Udayavani |

ಹುಕ್ಕೇರಿ: ಕೊರೊನಾ ನಿಯಂತ್ರಣಕ್ಕಾಗಿ ಸಾರ್ವಜನಿಕರ ಸೇವೆಗಾಗಿ ಉಚಿತ ಆಂಬ್ಯುಲೆನ್ಸ್‌ ನೀಡಿ ಸರ್ಕಾರದೊಂದಿಗೆ ಕೈಜೋಡಿಸುತ್ತಿರುವ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸೇವೆ ಶ್ಲಾಘನೀಯ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಹೇಳಿದರು.

Advertisement

ಪಟ್ಟಣದಲ್ಲಿ ಹಿರೇಮಠ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಉಚಿತವಾಗಿ ನೀಡಿದ ಆಂಬ್ಯುಲೆನ್ಸ್‌ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜನರು ಚಿಕಿತ್ಸೆ ಪಡೆಯಲು ವಾಹನಗಳ ಸೌಲಭ್ಯವಿಲ್ಲದೇ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶ್ರೀಗಳು ಉಚಿತವಾಗಿ ವಾಹನ ನೀಡುತ್ತಿದ್ದಾರೆ. ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಈ ವೇಳೆ ಪುರಸಭೆ ಅಧ್ಯಕ್ಷ ಎ.ಕೆ. ಪಾಟೀಲ, ಮಹಾವೀರ ಸಮೂಹ ಸಂಸ್ಥೆಗಳ ಅಧ್ಯಕ್ಷ ಮಹಾವೀರ ನಿಲಜಗಿ, ಪುರಸಭೆ ಸದಸ್ಯ ರಾಜೇಂದ್ರ ಮೂನ್ನೋಳಿ, ಜಿಲ್ಲಾಧಿ ಕಾರಿ ಎಂ.ಜಿ. ಹಿರೇಮಠ, ತಹಶೀಲ್ದಾರ್‌ ಡಿ.ಎಚ್‌. ಹೂಗಾರ, ತಾಪಂ ಇಒ ಬಿ.ಕೆ. ಲಾಳಿ, ಜಿಲ್ಲಾ ಆರೋಗ್ಯ ಅ ಧಿಕಾರಿ ಮುನ್ನಾಳ, ಡಿವೈಎಸ್ಪಿ ಮನೋಹರ ನಾಯಿಕ, ಸಿಪಿಐ ರಮೇಶ ಛಾಯಾಗೋಳ, ಡಾ| ಉಯದ ಕುಡಚಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next