ಮಾಗಡಿ: ಕೊರೊನಾ ಮಹಾಮಾರಿ ನಿರ್ಮೂಲನೆಗೆಕೋವಿಡ್ ವಾರಿಯರ್ ನೊಂದಿಗೆ ನಾನೂ ಕೂಡ ಒಬ್ಬವಾರಿಯರ್ ಆಗಿ ಕೆಲಸ ಮಾಡಲು ಇಚ್ಚಿಸುತ್ತೇನೆ ಎಂದುಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷಎಂ.ಜಿ.ರಂಗಧಾಮಯ್ಯ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕೋವಿಡ್ ತುರ್ತುಸೇವೆಗೆ ಉಚಿತ ಆ್ಯಂಬುಲೆನ್ಸ್ ಮತ್ತು ರೋಗಿಗಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಹಣ್ಣುಗಳನ್ನು ಹಾಗೂಇತರೆ ಸಿಬ್ಬಂದಿಗೆ ಮಾಸ್ಕ್ ಸ್ಯಾನಿಟೈಸರ್ ವಿತರಿಸಿ ಮಾತನಾಡಿದರು.
ಮಾಗಡಿ ತಾಲೂಕಿನಲ್ಲಿ ಮಹಾಮಾರಿಗೆ ಹೆಚ್ಚು ಮಂದಿಸಾವು, ನೋವನ್ನು ಅನುಭ ವಿಸುತ್ತಿದ್ದು, ಅವರಆರೋಗ್ಯದ ಸುಧಾರಣೆಗಾಗಿ ಮಾಗಡಿ ಸರ್ಕಾರಿ ಆಸ್ಪತ್ರೆಗೆಕೋವಿಡ್ ತರ್ತು ಸೇವೆಗೆ ವೈಯಕ್ತಿಕವಾಗಿ ಉಚಿತಆ್ಯಂಬುಲೆನ್ಸ್ ಸೇವೆ ಕಲ್ಪಿಸಿದ್ದೇನೆ. ಇನ್ನೂ ಹೋಬಳಿ ಮಟ್ಟಕ್ಕೆಕೋವಿಡ್ ತುರ್ತು ಆ್ಯಂಬುಲೆನ್ಸ್ ಸೇವೆ ಅಗತ್ಯವಿದ್ದರೆ ಆ್ಯಂಬುಲೆನ್ಸ್ ನೀಡಲು ಸದಾಬದ್ಧನಾಗಿದ್ದೇನೆ. ಏಕೆಂದರೆತಾಲೂಕಿನ ಜನರು ಕೊರಾನಾ ಗೆದ್ದು ಬರಬೇಕು. ಅವರಕುಟುಂಬ ಸಂತೋಷದಿಂದ ಬದುಕು ನಡೆಸಬೇಕು.ಯಾರೂ ಕೂಡ ಕೊರೊನಾಗೆ ಬಲಿಯಾಗಬಾರದುಎಂದು ಮಾಗಡಿಯಲ್ಲಿ ಆಕ್ಸಿಜನ್ ಘಟಕ ಸ್ಥಾಪನೆಗೆಸರ್ಕಾರಕ್ಕೆ ಮನವಿ ಮಾಡಿ ಒತ್ತಾಯಿಸಿದ್ದು, ಇಲ್ಲೇಸ್ಥಾಪನೆಗೆ ಸರ್ಕಾರವೂ ಸಮ್ಮತಿಸಿದೆ ಎಂದರು.
ಈ ಆಸ್ಪತ್ರೆಯಲ್ಲಿ 5 ಐಸಿಯು ಬೆಡ್ ಇದ್ದು, ಇದನ್ನುಹೆಚ್ಚಿಸಬೇಕೆಂದು ಸರ್ಕಾರವನ್ನು ಒತ್ತಾಯ ಮಾಡಲುಅಗತ್ಯ ಕ್ರಮ ಕೈಗೊಂಡಿದ್ದೇನೆ. ಮಾಗಡಿ ಯೋಜನಾಪ್ರಾಧಿಕಾರದಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 50ಲಕ್ಷ ನೀಡಲಾಗುವುದು. ಜೊತೆಗೆ ಮುಖ್ಯಮಂತ್ರಿಯಿಂದಹೆಚ್ಚು ಅನುದಾನಕ್ಕೆ ಮನವಿ ಮಾಡಿ ಒತ್ತಾಯಿಸಿ ಹೆಚ್ಚಿನಅನುದಾನ ತಂದು ಆಸ್ಪತ್ರೆಗೆ ಬೇಕಾದ ಅಗತ್ಯ ಸಂಪೂಣಸೌಲಭ್ಯ ಒದಗಿಸಲು ಪ್ರಾಮಾಣಿಕವಾಗಿ ಶ್ರಮಿ ಸುತ್ತೇನೆಎಂದು ತಿಳಿಸಿದರು.
ಮಾಗಡಿ ಯೋಜನಾ ಪ್ರಾಧಿಕಾರದಅಧ್ಯಕ್ಷ ಎಂ.ಜಿ.ರಂಗಧಾವ ುಯ್ಯ ಆಸ್ಪತ್ರೆಯ ರೋಗಿಗಳಿಗೆಮತ್ತು ಸಿಬ್ಬಂದಿಗೆ ಹಣ್ಣು, ಮಾಸ್ಕ್ ಸ್ಯಾನಿಟೈಸರ್ ಹಾಗೂಪಡಿತರ ಕಿಟ್ ವಿತರಿಸಿದರು. ತಹಶೀಲ್ದಾರ್ ಬಿ.ಜಿ.ಶ್ರೀನಿವಾಸ್ ಪ್ರಸಾದ್, ಟಿಎಚ್‌ಒ ಚಂದ್ರಶೇಖರ್,ಮಾಗಡಿ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಡಾ.ರಾಜೇಶ್, ಸಿಪಿಐ ಕುಮಾರ್ ಎ.ಪಿ ಇದ್ದರು.