Advertisement

“ಸುಷ್ಮಾ ಹೆಸರಲ್ಲಿ ಮೋಸ ಮಾಡಿದ ಹಾಸನದ “ವ್ಯಕ್ತಿ’ ವರ್ಷದ ಬಳಿಕ ಸೆರೆ

04:06 PM Feb 05, 2021 | Team Udayavani |

ಧಾರವಾಡ: ಮಹಿಳೆಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಮೋಸ ಮಾಡಿ ಹುಬ್ಬಳ್ಳಿ ತಾಲೂಕಿನ ಗುತ್ತಿಗೆದಾರನಿಂದ 15 ಲಕ್ಷಕ್ಕೂ ಹೆಚ್ಚು ಹಣ ಪಡೆದಿದ್ದ ಹಾಸನ ಮೂಲದ ವ್ಯಕ್ತಿಯನ್ನು 1 ವರ್ಷದ ಬಳಿಕ ಪೊಲೀಸರು ಬಂಧಿಸಿದ್ದಾರೆ.

Advertisement

ಪೊಲೀಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ಎಸ್‌ಪಿ ಪಿ.ಕೃಷ್ಣಕಾಂತ ಮಾರ್ಗದರ್ಶನದಲ್ಲಿ ಧಾರವಾಡ ಸೈಬರ್‌, ಆರ್ಥಿಕ ಮತ್ತು ಮಾದಕ ವಸ್ತು ಅಪರಾಧ ಠಾಣೆ ಸಿಬ್ಬಂದಿ ಬಂ ಧಿಸಿ, ಪ್ರಕರಣ ದಾಖಲಿಸಿದ್ದಾರೆ. ಸ

ಧಾರವಾಡ ಸೈಬರ್‌, ಆರ್ಥಿಕ ಮತ್ತು ಮಾದಕ ವಸ್ತು ಅಪರಾಧ ಠಾಣೆ ಸಿಪಿಐ ವಿಜಯ ಬಿರಾದಾರ ನೇತೃತ್ವದಲ್ಲಿ ಸಿಬ್ಬಂದಿ ತನಿಖೆ ಕೈಗೊಂಡು ಜ.31ರಂದು ಹಾಸನ ತಾಲೂಕಿನ ದೊಡ್ಡಗಿಣಿಗೇರೆ ಗ್ರಾಮದಲ್ಲಿ ಆರೋಪಿ ಪ್ರತಾಪ ಡಿ.ಎಂ.ನನ್ನು ಬಂಧಿಸಿದ್ದಾರೆ. ಮೋಸ ಮಾಡಿ ಪಡೆದ ಹಣದಲ್ಲಿನ 1.25 ಲಕ್ಷ ರೂ. ವಶಪಡಿಸಿ ಕೊಂಡಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆ 66 ಡಿ ಮತ್ತು ಐಪಿಸಿ 420 ರ ಕಲಂ ಅಡಿ ಆರೋಪಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಏನಿದು ಪ್ರಕರಣ?: ಹಾಸನ ತಾಲೂಕಿನ ದೊಡ್ಡಗಿಣಿಗೇರೆ ಗ್ರಾಮದ ಡಿ.ಎಂ.ಪ್ರತಾಪ್‌ (29) ಎಂಬಾತ ಸುಷ್ಮಾ ಸುಸು ಎಂಬ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಹುಬ್ಬಳ್ಳಿ ತಾಲೂಕಿನ ಗಂಗಿವಾಳ ಗ್ರಾಮದ ರುದ್ರಗೌಡ ಮಲ್ಲನಗೌಡ ಪಾಟೀಲ ಎಂಬ ಗುತ್ತಿಗೆದಾರನಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿ ಪರಿಚಯ ಮಾಡಿಕೊಂಡಿದ್ದ. 2017ರಲ್ಲಿ ವಾಟ್ಸ್‌ಆ್ಯಪ್‌ ನಂಬರ್‌ ಪಡೆದು ಮೂರು ವರ್ಷಗಳಿಂದ ರುದ್ರಗೌಡ ಪಾಟೀಲಗೆ ಚಾಟಿಂಗ್‌ ಮಾಡಿದ್ದಾನೆ.

ಇದನ್ನೂ ಓದಿ :ಮೂರು ದಿನಗಳೊಳಗೆ ಕೊರೊನಾ ಲಸಿಕೆ ಗುರಿ ಸಾಧಿಸಿ

Advertisement

ಈ ಚಾಟಿಂಗ್‌ ಸಮಯದಲ್ಲಿ ಆರೋಪಿ ಪ್ರತಾಪ, ರುದ್ರಗೌಡನಿಗೆ ತಾನು ಮೂಕಿ, ಕಿವುಡಿ ಎಂದು ಮೆಸೇಜ್‌ ಮಾಡುತ್ತ ನಾನು  ನಿಮ್ಮನ್ನು ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆಂದು ನಂಬಿಸಿದ್ದಾನೆ. ರುದ್ರಗೌಡನು ಆರೋಪಿ ಪ್ರತಾಪ ತನಗೆ ಹಾಗೂ ತನ್ನ ಪರಿಚಯಸ್ಥ 8-10 ಜನರ ಬ್ಯಾಂಕ್‌ ಖಾತೆಗಳಿಗೆ 14ರಿಂದ 15 ಲಕ್ಷ ರೂ. ಹಾಕಿಸಿ ಕೊಂಡು ಮೋಸ ಮಾಡಿದ್ದಾನೆ ಎಂದು 2019, ಡಿ.9ರಂದು ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದ.

Advertisement

Udayavani is now on Telegram. Click here to join our channel and stay updated with the latest news.

Next