ಮಂಗಳೂರು : ಕ್ರೆಡಿಟ್ ಕಾರ್ಡ್ ಮುಖೇನ ಸಾರ್ವಜನಿಕರ ಗಮನಕ್ಕೆ ಬರದಂತೆ ಹಣವನ್ನು ಮೋಸದಿಂದ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಳ್ಳುತ್ತಿದ್ದ ಇಬ್ಬರು ಟಿಬೆಟಿಯನ್ ನಿರಾಶ್ರಿತರನ್ನು ಮಂಗಳೂರು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬಂಧಿತರು ಉತ್ತರಕನ್ನಡದ ಮುಂಡಗೋಡ ಟಿಬೆಟಿಯನ್ ಕ್ಯಾಂಪ್ ನ ಲೊಬಾಸಾಂಗ್ ಸಾಂಗ್ಯೆ (24) ಮತ್ತು ದಕಪ ಪುಂದೆ (40) ಎನ್ನುವವರಾಗಿದ್ದಾರೆ.
ಇಬ್ಬರೂ ಚೀನಾದ ನಿಷೇಧಿತ ಆಪ್ ಗಳಾದ ವೀ ಚಾಟ್ ಮತ್ತು ರೆಡ್ ಪ್ಯಾಕ್ ಮೂಲಕ ಹವಾಲಾ ರೀತಿಯಲ್ಲಿ ಹಣವನ್ನು ಟಿಬೆಟಿನಿಂದ ಮುಂಡಗೋಡಿಗೆ ವರ್ಗಾಯಿಸಿಕೊಂಡಿದ್ದರು.
ಮಂಗಳೂರಿನ ವ್ಯಕ್ತಿಯೊಬ್ಬರ ಕ್ರೆಡಿಟ್ ಕಾರ್ಡ್ ಮೂಲಕ 1,12,000 ರೂ ವಂಚನೆ ಎಸಗಿದ್ದರು.
ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರು ಪಡಿಸಿ, 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ.