ಬೆಂಗಳೂರು: ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಸಹಿಗಳನ್ನು ನಕಲು ಮಾಡಿಕೊಂಡು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಬಿಎಂಟಿಸಿಯ ಭದ್ರತಾ ಮತ್ತು ವಿಚಕ್ಷಣಾ ದಳದ ಸಹಾಯಕ ಅಧಿಕಾರಿ ಸಿ.ಕೆ. ರಮ್ಯಾ ವಿಲ್ಸನ್‌ಗಾರ್ಡನ್ ಠಾಣೆಯಲ್ಲಿ ಬಿಎಂಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ(ಕೆಎಸ್ ಆರ್‌ಟಿಸಿಯ ಪ್ರಸ್ತುತ ಮಂಡಳಿ ಕಾರ್ಯದರ್ಶಿ) ಶ್ರೀರಾಮ ಮುಲ್ಕಾವಾನ್, ಮದ್ದೂಡಿ ವಿಭಾಗೀಯ ಸಂಚಲನ ಅಧಿಕಾರಿ ಎಸ್.ಶ್ಯಾಮಲಾ, ಸಹಾಯಕ ಸಂಚಾರ ವ್ಯವಸ್ಥಾಪಕ ಬಿ.ಕೆ. ಮಮತಾ, ಸಹಾಯಕ ಸಂಚರ ನಿರೀಕ್ಷಕ ಗುಣಶೀಲಾ, ಸಹಾಯಕ ಸಂಚಾರ ಅಧೀಕ್ಷಕಿ ಟಿ.ಅನಿತಾ, ಸಂಚಾರ ನಿರೀಕ್ಷಕ ಗೋಪಿ, ಕಿರಿಯ ಸಹಾಯಕ ಪ್ರಕಾಶ್ ಕೊಪ್ಪಳ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ಸಂಸ್ಥೆಯ ಭದ್ರತಾ ಮತ್ತು ವಿಚಕ್ಷಣಾ ದಳದ ನಿರ್ದೇಶಕ, ಐಪಿಎಸ್ ಅಧಿಕಾರಿ ಕೆ. ಅರುಣ್, ಐಎಎಸ್ ಅಧಿಕಾರಿ, ವ್ಯವಸ್ಥಾಪಕ ನಿರ್ದೇಶಕರಾದ ರೇಜು ಅವರ ಹೆಸರಿನಲ್ಲಿ ಅರ್ಮೂರು ಡಿಸ್ಲೆ ಸಿಸ್ಟಂ ಪ್ರೈವೇಟ್ ಲಿವಿಮೆಟ್‌ಗೆ ಸಂಬಂಧಿಸಿದ ಕಡತಕ್ಕೆ ಸಹಿ ಮಾಡಲಾಗಿದೆ. ಇನ್ನು ಐಎಎಸ್ ಅಧಿಕಾರಿ ಅನ್ಬುಕುಮಾರ್ ಮತ್ತು ಜಿ.ಸತ್ಯವತಿ ಅವರ ಸಹಿ ಮಾಡಿ ಫ್ಲ್ಯಾಟ್ ಹಂಚಿಕೆ ಮಾಡಿದ್ದಾರೆ. ಹಾಗೇ ಜಿ.ಸತ್ಯವತಿ ಅವರ ಸಹಿ ಬಳಸಿ ಎಟಿಎಂ ಕೌಂಟರ್‌ಗಳ ಪರವಾನಿಗೆಯನ್ನು ವಿಸ್ತರಣೆ ಮಾಡಿರುವುದು ಪತ್ತೆಯಾಗಿದೆ. ಹೀಗಾಗಿ ಸಂಸ್ಥೆಯ ಹಿರಿಯ ಅಧಿಕಾರಿಗಳ ಸಹಿಯನ್ನು ನಕಲು ಮಾಡಿ ಸಂಸ್ಥೆಯ ಆರ್ಥಿಕ ನಷ್ಟ ಉಂಟು ಮಾಡಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ರಮ್ಯಾ ದೂರಿನಲ್ಲಿ ಕೋರಿದ್ದಾರೆ.
ಮತ್ತೂಂದು ಪ್ರಕರಣ: ಲಕ್ಷಾಂತರ ರೂ. ಮೋಸ: ಆರೋಪಿಗಳು ಐಎಎಫ್ಎಸ್, ಐಎಎಸ್, ಐಪಿಎಸ್ ಅಧಿಕಾರಿಗಳ ನಕಲಿ ಸಹಿ ಬಳಸಿ ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಸಂಬಂಧ ರಮ್ಯಾ ದೂರು ನೀಡಿದ್ದು, ಶ್ರೀರಾಮ ಮುಲ್ಕಾವಾನ್, ಶ್ಯಾಮಾಲಾ ಎಸ್.ಮಧ್ದೋಡಿ, ಬಿ.ಕೆ.ಮಮತಾ, ಸಹಾಯಕ ಸಂಚಾರ ಅಧೀಕ್ಷಕಿ ಟಿ.ಅನಿತಾ, ಸಂಚಾರ ನಿರೀಕ್ಷಕ ಸತೀಶ್, ಪ್ರಕಾಶ್ ಕೊಪ್ಪಳ ಹಾಗೂ ಇತರರ ವಿರುದ್ಧ ವಿಲ್ಸನ್ ಗಾರ್ಡ್‌ನ್ ಠಾಣೆಯಲ್ಲಿ ಮತ್ತೂಂದು ಪ್ರಕರಣ ದಾಖಲಾಗಿದೆ.
ಐಎಫ್ಎಸ್ ಅಧಿಕಾರಿ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ನಿರ್ದೇಶಕ ಸೂರ್ಯಸೇನ್, ಐಎಎಸ್ ಅಧಿಕಾರಿ ಅನುºಕುಮಾರ್ ಅವರ ಸಹಿ ಬಳಸಿ ವಾಣಿಜ್ಯ ಶಾಖೆ ಟೆಂಡರ್ ನೋಟಿಫಿಕೇಷನ್ ಹೊರಡಿಸಿದ್ದಾರೆ. ಜತೆಗೆ ಬಿಟಿಎಂ ಲೇಔಟ್ ಬಸ್ ನಿಲ್ದಾಣ ಸ್ವತ್ಛತಾ ನಿರ್ವಹಣೆ ಪರವಾನಗಿದಾರರನ್ನಾಗಿ ಎನ್. ಎಲ್.ಜಯಶ್ರೀ ಅವರನ್ನು ಮೊದಲನೇ ಸಂಧಾನ ಸಭೆಯಲ್ಲಿಯೇ ಆಯ್ಕೆ ಮಾಡಿರುವುದಲ್ಲದೇ, ಪರವಾನಗಿದಾರರಿಗೆ ಸಂಸ್ಥೆಯಿಂದ ನಿರ್ವಹಣಾ ವೆಚ್ಚ 10.65 ಲಕ್ಷ ರೂ. ಹೆಚ್ಚುವರಿಯಾಗಿ ಪಾವತಿಯಾಗಲು ಕಾರಣರಾಗಿದ್ದಾರೆ. ಟೆಂಡ್ಸ್ ನೋಟಿಫಿಕೇಷನ್‌ಗೆ ಸೇರಿದ ಕಡತಕ್ಕೆ ಐಎಎಸ್ ಅಧಿಕಾರಿ ರೇಜು ಅವರ ಸಹಿ ಬಳಸಿ ಕಡಿಮೆ ಬಿಡ್ ಮಾಡಿ ಬಿಡ್‌ದಾರರನ್ನು ಪರವಾ ನಗಿದಾರರನ್ನಾಗಿ ಆಯ್ಕೆ ಮಾಡಿದ್ದಾರೆ. ಅದರಿಂದ ಸಂಸ್ಥೆಗೆ 9.41 ಲಕ್ಷ ರೂ.ವಂಚಿಸಿದ್ದಾರೆ. ಮಲ್ಲಸಂದ್ರ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣಕ್ಕೆ ಸಂಬಂಧಿಸಿದ ಕಡತಕ್ಕೆ ಐಪಿಎಸ್ ಅಧಿಕಾರಿ ಕೆ.ಅರುಣ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಿಖಾ ಸಹಿ ಬಳಸಿಕೊಂಡು ಪರವಾನಗಿದಾರರಾದ ಬಿ.ಎನ್.ಜಗದೀಶ್ ಎಂಬವರಿಗೆ ರೆಂಟ್‌ಫ್ರೀಗೆಸ್ಟೇಷನ್ ಪಿರೇಡ್ ವಿಸ್ತರಿಸಿ ಸಂಸ್ಥೆಗೆ 52.15 ಲಕ್ಷ ರೂ. ವಂಚಿಸಿದ್ದಾರೆ.