Advertisement

Fraud: ಫ್ಲ್ಯಾಟ್‌ ಖರೀದಿ ಹೆಸರಲ್ಲಿ ಖಾಸಗಿ ಫೈನಾನ್ಸ್‌ ಕಂಪನಿಗೆ 60.8 ಲಕ್ಷ ವಂಚನೆ

11:23 AM Apr 15, 2024 | Team Udayavani |

ಬೆಂಗಳೂರು: ಫ್ಲ್ಯಾಟ್‌ ಖರೀದಿಸುವ ಸೋಗಿನಲ್ಲಿ ನಕಲಿದಾಖಲೆ ಸಲ್ಲಿಸಿ ಖಾಸಗಿ ಫೈನಾನ್ಸ್‌ ಕಂಪನಿಯಿಂದ 60.85 ಲಕ್ಷ ರೂ. ಸಾಲ ಪಡೆದು ವಂಚಿಸಿದ ಆರೋಪದಡಿ ದಂಪತಿ ಸೇರಿ ಮೂವರ ವಿರುದ್ಧ ಜಯನಗರ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

Advertisement

ಜಯನಗರ 8ನೇ ಬ್ಲಾಕ್‌ನ ಖಾಸಗಿ ಫೈನಾನ್ಸ್‌ ಲಿಮಿಟೆಡ್‌ ಕಂಪನಿಯಲ್ಲಿ ಸೇಲ್ಸ್ ಮ್ಯಾನೇಜರ್‌ ಎಲ್. ಗಜೇಂದ್ರ ಎಂಬವರು ನೀಡಿದ ದೂರಿನ ಮೇರೆಗೆ ಆರ್‌ಎಂವಿ 2ನೇ ಹಂತದ ರೈಲ್ವೆ ಕಾಲೋನಿ ನಿವಾಸಿಗಳಾದ ಕೋಮಲ ಮೋಹಿತೆ(33), ಆಕೆಯ ಪತಿ ವಿಜಯಕುಮಾರ್‌ ಗೋಪಾಲ್‌ ರಾವ್‌ (38) ಹಾಗೂ ಉತ್ತರಹಳ್ಳಿಯ ಅನುಸೂಯದೇವಿ(42) ಎಂಬವರ ವಿರುದ್ಧ ವಂಚನೆ, ನಕಲಿ ದಾಖಲೆ ಸೃಷ್ಟಿ, ನಂಬಿಕೆ ದ್ರೋಹ ಸೇರಿ ವಿವಿಧ ಆರೋಪಗಳ ಅಡಿ ಎಫ್ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಏನಿದು ವಂಚನೆ?: 2 ವರ್ಷಗಳ ಹಿಂದೆ ಆರೋಪಿತ ದಂಪತಿ ಜಯನಗರದ ಖಾಸಗಿ ಫೈನಾನ್ಸ್‌ಗೆ ಹೋಗಿ, ಉತ್ತರಹಳ್ಳಿಯ ಬಿಕಾಸಿಪುರ ಗ್ರಾಮದ ಆನಂದಕುಟೀರಅಪಾರ್ಟ್‌ಮೆಂಟ್‌ನ 2ನೇ ಮಹಡಿಯ ಫ್ಲ್ಯಾಟ್‌ವೊಂದನ್ನು ಮಾಲೀಕರಾದ ಎಚ್‌.ಕೆ.ಅನುಸೂಯದೇವಿ ಎಂಬವರಿಂದ ಖರೀದಿಸುತ್ತಿದ್ದೇವೆ. ಹೀಗಾಗಿ ನಿಮ್ಮ ಫೈನಾನ್ಸ್‌ನಿಂದ ಸಾಲಬೇಕೆಂದು ಕೇಳಿದ್ದು, ಅದಕ್ಕೆ ಪೂರಕ ದಾಖಲೆಗಳನ್ನು ನೀಡಿದ್ದರು. ಈ ದಾಖಲೆಗಳ ಪರಿಶೀಲಿಸಿದಾಗ ಫೈನಾನ್ಸ್‌ ಅಧಿಕಾರಿಗಳು 2022ರ ಸೆ.2ರಂದು ದಂಪತಿಗೆ 60.85 ಲಕ್ಷ ರೂ. ಸಾಲ ಮಂಜೂರು ಮಾಡಿದ್ದಾರೆ. ಫ್ಲ್ಯಾಟ್‌ ಮಾಲೀಕರಾದ ಅನುಸೂಯದೇವಿ ಹೆಸರಿಗೆ ಚೆಕ್‌ ನೀಡಲಾಗಿದ್ದು, ಹಣ ಕೂಡ ಅನುಸೂಯದೇವಿ ಖಾತೆಗೆ ಜಮೆ ಆಗಿತ್ತು. ಹೀಗಾಗಿ ಆರೋಪಿತ ದಂಪತಿ ಪ್ರತಿ ತಿಂಗಳು 48 ಸಾವಿರ ರೂ. ಪಾವತಿಸುತ್ತಿದ್ದರು. ಈ ಮಧ್ಯೆ ಕಳೆದ 4 ತಿಂಗಳಿಂದ ಆರೋಪಿತರು ಹಣ ಪಾವತಿಸಿಲ್ಲ. ಅದರಿಂದ ಅನುಮಾನಗೊಂಡ ಫೈನಾನ್ಸ್‌ ಅಧಿಕಾರಿಗಳು ಆರೋಪಿತರು ನೀಡಿದ ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next