Advertisement

Matrimonial: ಮದುವೆ ವೆಬ್‌ಗಳ ಮೂಲಕವೂ ವಂಚನೆ

09:27 PM Aug 11, 2023 | Team Udayavani |

ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಡೇಟಿಂಗ್‌ ಮತ್ತು ಮದುವೆ ವೆಬ್‌ಸೈಟ್‌ಗಳ ಮೂಲಕ ನಡೆಯುವ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಈ ಕುರಿತು ನಾಗರಿಕರು ಅದರಲ್ಲೂ ಮುಖ್ಯವಾಗಿ ಯುವತಿಯರು/ಮಹಿಳೆಯರು ಜಾಗ್ರತೆ ವಹಿಸುವಂತೆ ಕೇಂದ್ರ ಸರ್ಕಾರ ಎಚ್ಚರಿಸಿದೆ.

Advertisement

ವರದಿಯ ಪ್ರಕಾರ, ಭಾರತದ ಶೇ.66ರಷ್ಟು ವಯಸ್ಕರು ಒಂದಲ್ಲ ಒಂದು ರೀತಿಯಲ್ಲಿ ಈ ಡೇಟಿಂಗ್‌/ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ಗಳ ಬಲೆಗೆ ಬಿದ್ದಿದ್ದಾರೆ. ಸಂತ್ರಸ್ತರು ಸರಾಸರಿ 7,966 ರೂ. ಗಳನ್ನು ಕಳೆದುಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಈ ವಂಚನೆಯು ದೇಶಾದ್ಯಂತ ಹರಡಿಕೊಂಡಿದೆ. ಎಲ್ಲೋ ಗೌಪ್ಯವಾಗಿ ದೇಶ ಅಥವಾ ಹೊರದೇಶದಲ್ಲಿ ಇರುವ ವಂಚಕರು ಡೇಟಿಂಗ್‌ ಮತ್ತು ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ ಮೂಲಕ ಪರಿಚಯಿಸಿಕೊಂಡು, ವಂಚಿಸುತ್ತಿದ್ದಾರೆ. ಹೆಚ್ಚಿನ ಪ್ರಕರಣಗಳಲ್ಲಿ ತಮಗೆ ದುಬಾರಿ ಉಡುಗೊರೆ ಕಳುಹಿಸುತ್ತಿರುವುದಾಗಿ, ಇದಕ್ಕೆ ಕಸ್ಟಮ್ಸ್‌ ಸುಂಕವೆಂದು ಇಷ್ಟು ಹಣವನ್ನು ಪಾವತಿಸಬೇಕೆಂದು ಹೇಳುತ್ತಾರೆ. ದುಬಾರಿ ಉಡುಗೊರೆಯ ಆಸೆಗೆ ಬೀಳುವವರು, ತಮ್ಮ “ಸ್ನೇಹಿತ/ಪ್ರೇಮಿ” ಎಂದು ನಂಬಿರುವ ಆನ್‌ಲೈನ್‌ ವಂಚಕ ಬೀಸುವ ಬಲೆಗೆ ಬೀಳುತ್ತಾರೆ. ವಂಚಕ ಹೇಳಿದಂತೆ ಹಣ ಪಾವತಿಸಿ ಮೋಸ ಹೋಗುತ್ತಾರೆ. ಅಮಾಯಕರೇ ಇವರ ಟಾರ್ಗೆಟ್‌. ಈ ರೀತಿ “ದುಬಾರಿ ಉಡುಗೊರೆ’ಯ ವಂಚನೆಗೆ ಒಳಗಾಗದಿರಿ ಎಂದು ಕೇಂದ್ರ ಹಣಕಾಸು ಸಚಿವಾಲಯವು ನಾಗರಿಕರಿಗೆ ಎಚ್ಚರಿಕೆ ನೀಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next