Advertisement
ನ್ಯಾ| ಪಂಕಜ್ ಮಿತ್ತಲ್ ಮತ್ತು ನ್ಯಾ| ಆರ್. ಮಹಾದೇವನ್ ಅವರಿದ್ದ ಪೀಠವು ಈ ಕುರಿತು ಮಹತ್ವದ ತೀರ್ಪು ನೀಡಿದೆ. ಮತಾಂತರದ ಉದ್ದೇಶವು ಬಹುಮಟ್ಟಿಗೆ ಮೀಸಲು ಸೌಲಭ್ಯದ ಪ್ರಯೋಜನಗಳನ್ನು ಪಡೆಯುವುದಾಗಿದ್ದರೆ ಮತ್ತು ಮತಾಂತರಗೊಂಡ ಧರ್ಮದಲ್ಲಿ ಯಾವುದೇ ನಿಜವಾದ ನಂಬಿಕೆಯಿಲ್ಲದಿದ್ದರೆ, ಅದಕ್ಕೆ ಮಾನ್ಯತೆ ಇರುವುದಿಲ್ಲ. ಅಂತಹ ಜನರಿಗೆ ಮೀಸಲಾತಿಯ ಪ್ರಯೋಜನಗಳನ್ನು ವಿಸ್ತರಿಸುವುದು ಸಾಮಾಜಿಕ ನೀತಿ ಮತ್ತು ಮೀಸಲಾತಿಗೆ ಅಪಚಾರವಾಗುತ್ತದೆ ಎಂದು ಪೀಠ ಹೇಳಿದೆ.
ಜನ್ಮತಃ ಕ್ರೈಸ್ತರಾಗಿರುವ ಪುದುಚೇರಿಯ ಸಿ. ಸೆಲ್ವರಾಣಿ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಎಸ್‌ಟಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದರು. ಅದೇ ಆಧಾರದ ಮೇಲೆ ಗುಮಾಸ್ತೆ ಹುದ್ದೆಗೆ ಅರ್ಜಿ ಹಾಕಿದ್ದರು. ಆದರೆ ಸರಕಾರ ಒಪ್ಪಿರಲಿಲ್ಲ. ಇದನ್ನು ಪ್ರಶ್ನಿಸಿ ಆಕೆ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ವೇಳೆ ಆಕೆಯ ಪೋಷಕರು ಭಾರತೀಯ ಕ್ರೈಸ್ತ ವಿವಾಹ ಕಾಯ್ದೆಯಡಿ ಮದುವೆಯಾಗಿರುವುದು, ಆಕೆ ನಿಯಮಿತವಾಗಿ ಚರ್ಚ್‌ಗೆ ಹೋಗುತ್ತಿರುವುದು, ಕೇವಲ ನೌಕರಿ ಆಸೆಗೋಸ್ಕರ ಹಿಂದೂ ಧರ್ಮ ಸ್ವೀಕರಿಸಿದ್ದಾರೆ ಎಂದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆಯ ಅರ್ಜಿಯನ್ನು ತಳ್ಳಿ ಹಾಕಿತ್ತು. ಬಳಿಕ ಆಕೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇಂತಹ ದ್ವಂದ್ವ ನಿರ್ಧಾರಗಳನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.