Advertisement

Fraud: ಹಳೆ ಬ್ಯಾಟರಿ ನೀಡುವುದಾಗಿ ವಂಚನೆ

10:10 PM Sep 28, 2024 | Team Udayavani |

ಉಡುಪಿ: ಗುಜರಿ ವ್ಯಾಪಾರ ನಡೆಸುವ ಅಲೆವೂರಿನ ರಾಮ ಅವರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಆನ್‌ಲೈನ್‌ ಮೂಲಕ ಬ್ಯಾಟರಿ ವ್ಯಾಪಾರ ಮಾಡುವ ಬಗ್ಗೆ ಮಾತುಕತೆ ನಡೆಸಿ ವಂಚನೆ ಮಾಡಿದ್ದಾರೆ.

Advertisement

ಸೆ.26ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ನಮ್ಮಲ್ಲಿ ಅಪಾರ ಬ್ಯಾಟರಿಗಳಿದ್ದು, ಎಷ್ಟಕ್ಕೆ ಕೊಂಡುಕೊಳ್ಳುವಿರಿ ಎಂದು ಕೇಳಿದ್ದು, ಕೆ.ಜಿ. ಗೆ 85 ರೂ. ನಂತೆ ಮಾತುಕತೆ ನಡೆಸಿದ್ದಾರೆ. ಅಪರಿಚಿತ ವ್ಯಕ್ತಿಯ ಬೇಡಿಕೆಯಂತೆ ರಾಮ   25 ಸಾ. ರೂ. ಅನ್ನು ಫೋನ್‌ ಪೇ ಮೂಲಕ ಪಾವತಿಸಿದ್ದಾರೆ. ಬಳಿಕ ಹಣ ಪಡೆದವರ ಫೋನ್‌ ಸ್ವಿಚ್‌ಆಫ್ ಆಗಿದೆ ಎಂದು ದೂರು ನೀಡಲಾಗಿದೆ. ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next