Advertisement

ಉದ್ಯೋಗ ಕೊಡಿಸುವುದಾಗಿ ವಂಚನೆ: ದಾಳಿ

02:50 PM Sep 13, 2022 | Team Udayavani |

ಕೋಲಾರ: ಯುವಕ ಯುವತಿಯರಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿ ವಂಚನೆ ಮಾಡುತ್ತಿದ್ದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಕೋಲಾರದ ಖಾಸಗಿ ಸಂಸ್ಥೆ ಕಚೇರಿಗಳ ದಾಳಿ ಮಾಡಿ ಹಲವರನ್ನು ವಿಚಾರಣೆಗೊಳಪಡಿಸಿದರು.

Advertisement

ನಗರದ ಎರಡು ಮೂರು ಕಡೆಗಳಲ್ಲಿ ಕಚೇರಿ ತೆರೆದು ಚೈನ್‌ ಲಿಂಕ್‌ ಮಾರ್ಕೆಟಿಂಗ್‌ ತರಬೇತಿ ನೀಡಿ ಹಣ ವಸೂಲಿ ಮಾಡುತ್ತಿದ್ದ ಕಂಪನಿ, ಓರ್ವರಿಂದ 40 ಸಾವಿರ ಹಣ ಪಡೆದು ಒಬ್ಬರಿಂದ ಮೂರು ಮಂದಿ ಸೇರಿಸುವ ಚೈನ್‌ ಲಿಂಕ್‌ ರೀತಿಯ ವ್ಯವಹಾರವನ್ನು ಕಂಪನಿ ನಡೆಸುತ್ತಿತ್ತು. ಸೋಮವಾರ ಕೋಲಾರ ನಗರದ ನಗರದ ಮಹಾಲಕ್ಷ್ಮೀ ಬಡಾವಣೆ, ಚೌಡೇಶ್ವರಿ ನಗರ, ಇಟಿಸಿಎಂ ಸರ್ಕಲ್‌ ಬಳಿ ಮೂರು ಕಚೇರಿಗಳ ಮೇಲೆ ಪೊಲೀಸರು ದಾಳಿ ನಡೆಸಿದರು.

ಖುಷಿ ಸಂಪದ, ಮಾಡ್ರನ್‌ ಸೋಲ್‌ ಪ್ರೈವೆಟ್‌ ಲಿಮಿಟೆಡ್‌ ಕಚೇರಿಗಳು ಸಾವಿರಾರು ಯುವಕರಿಗೆ ಕೆಲಸ ಕೊಡಿಸುವುದಾಗಿ ವಂಚಿಸಿರುವ ಆರೋಪ ಹೊತ್ತುಕೊಂಡಿದ್ದವು. ದಾಳಿ ವೇಳೆ ಪೊಲೀಸರು ಪ್ರಮುಖ ಕಡತಗಳ ಪರಿಶೀಲನೆ ನಡೆಸಿದರು. ಆಡಳಿತ ಮಂಡಳಿಯಿಂದ ಮಾಹಿತಿ ಪಡೆದುಕೊಂಡರು.

ಎಸ್ಪಿ ಡಿ ದೇವರಾಜ್‌ ಮಾರ್ಗದರ್ಶನದಲ್ಲಿ ಮೂರು ತಂಡ ಗಳಿಂದ ಕಾರ್ಯಾಚರಣೆ ನಡೆಯಿತು. ಹಲವರನ್ನು ವಶಕ್ಕೆ ಪಡೆದು ಪೊಲೀಸರು ಕಂಪನಿಗಳ ಹಿಂದಿರುವ ವ್ಯಕ್ತಿಗಳ ಕುರಿತಂತೆ ಮಾಹಿತಿ ಕಲೆ ಹಾಕುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next