Advertisement

Fraud: ಮಿಶೋಗೆ ವಂಚಿಸುತ್ತಿದ್ದ 21 ಮಂದಿ ಸೆರೆ

02:33 PM Aug 29, 2023 | Team Udayavani |

ಬೆಂಗಳೂರು:  ಇ-ಕಾಮರ್ಸ್‌ನಲ್ಲಿ ವಸ್ತುಗಳನ್ನು ಆರ್ಡರ್‌ ಮಾಡುವ ಗ್ರಾಹಕರ ಡೇಟಾ ಕಳವು ಮಾಡಿ, ನಕಲಿ ವಸ್ತುಗಳನ್ನು ಡೆಲಿವರಿ ಮಾಡಿ ಕಂಪನಿಗೆ ಲಕ್ಷಾಂತರ ರೂ. ವಂಚಿಸಿದ್ದ 21 ಮಂದಿ ಅಂತಾರಾಜ್ಯ ಸೈಬರ್‌ ವಂಚಕರು ಉತ್ತರ ವಿಭಾಗದ ಸೆನ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಮುಂಬೈನ ಅಭಿಷೇಕ್‌ ಗುಪ್ತಾ, ಆಶಿಷ್‌ ತಲಿವಿಯಾ ಸೂರತ್‌ನ ಮಿಲನ್‌, ಗೌತಮ್‌ ಪನಸೂರ್ಯ, ಪಾರ್ತ್‌ ತಲಿವಿಯಾ, ವಾಗ್ಸಿಯಾ ಹರ್ಷ, ಅಕ್ಷಯ್‌, ದರ್ಶಿತ್‌, ರಾಹುಲ್‌, ವಾಗ್ಸೀಯಾ ಕೆಯೂರ್‌, ಬ್ರಿಜೇಶ್‌ ಸೋರ್ಲಾ, ಗೌರವ್‌ ಜಗದೀಶ್‌ ಬಾಯಿ, ರೇಖಾಬಿನ್‌ ರತಿ ಬಾಯಿ, ವಿವೇಕ್‌, ತಲವಿಯಾ ಭೂಮಿತಾ, ಪನ್‌ಸೂರ್ಯ ಉತ್ತಮ್‌, ನಿಕುಂಜಾ ಮತ್ತು ಭೂಪಾಲ್‌ನ ಮೊದ್‌ ಸಾಕಿರ್‌ ಅನ್ಸಾರಿ, ಅಂಕಿತ್‌ ವಿಶ್ವಕುಮಾರ್‌, ಅಂಕಿತಾ ವಿಶುಕುಮಾರ್‌, ಶುಭಂ ವರ್ಮಾ ಬಂಧಿತರು. ಆರೋಪಿಗಳಿಂದ 11 ಮೊಬೈಲ್‌ಗ‌ಳು, 3 ಲ್ಯಾಪ್‌ಟಾಪ್‌, 1

ಹಾರ್ಡ್‌ಡಿಸ್ಕ್, ಹಾಗೂ ಆರೋಪಿಗಳ ಖಾತೆಯಲ್ಲಿದ್ದ 19,45 ಲಕ್ಷ ರೂ. ನಗದು ಫ್ರಿಜ್‌ ಮಾಡಲಾಗಿದೆ. ಜತೆಗೆ ಆರೋಪಿಗಳಿಂದ 7.50 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ.

ಪ್ಲೀಪ್‌ಕಾರ್ಟ್‌, ಅಮೆಜಾನ್‌, ಮಿಶೋ, ಅಜಿಯೋ ಸೇರಿ ವಿವಿಧ ಕಂಪನಿಗಳಿಂದ ಬರುವ ಆರ್ಡರ್‌ ಪಡೆದು ಗ್ರಾಹಕರಿಗೆ ವಸ್ತುಗಳ ಡೆಲಿವರಿ ಮಾಡುವ ವ್ಯವಹಾರ ಮಾಡುವ ವ್ಯಕ್ತಿಗೆ 2021ರಿಂದ ಇದುವರೆಗೂ 70 ಲಕ್ಷ ರೂ. ವಂಚಿಸಿ ದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸೆನ್‌ ಠಾಣೆ ಪೊಲೀಸರು ಹೇಳಿದರು.

ಬಂಧಿತರು ಪ್ರಮುಖವಾಗಿ ಮಿಶೋ ಉತ್ಪನ್ನಗಳನ್ನು ಪಡೆಯುವ ಗ್ರಾಹಕರನ್ನೇ ಟಾರ್ಗೆಟ್‌ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ. ಆರೋಪಿಗಳ ಪೈಕಿ ಕೆಲವರು ಈ ಹಿಂದೆ ಮಿಶೋದಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಕಂಪನಿ ಉತ್ಪನ್ನಗಳನ್ನು ಆರ್ಡರ್‌ ಮಾಡುವ ಗ್ರಾಹಕರ ಡೇಟಾಗಳನ್ನು ಕಳವು ಮಾಡಿ, ಅದನ್ನು ಇತರೆ ಆರೋಪಿಗಳಿಗೆ ಮಾರಾಟ ಮಾಡುತ್ತಿದ್ದರು. ಬಳಿಕ ಮುಂಬೈ ಮೂಲದ ಆರೋಪಿಗಳು ಆರ್ಡರ್‌ ಮಾಡಿದ ವಸ್ತುಗಳ ಹೆಸರಿನ ನಕಲಿ ವಸ್ತುಗಳ ಫೇಕ್‌ ಶೀಪ್‌ಮೇಟ್‌ ಕಳುಹಿಸಿ, ಗ್ರಾಹಕರಿಂದ ನಗದು ಪಡೆದು ವಂಚಿಸುತ್ತಿದ್ದರು.

Advertisement

2 ವರ್ಷಗಳಿಂದ ಇದೇ ರೀತಿಯ ವಂಚನೆ ನಡೆಯುತ್ತಿತ್ತು. ಆದರೆ, ದೂರುದಾರರು ಮಾಸಿಕ ಕೋಟ್ಯಂತರ ರೂ. ವಹಿವಾಟು ನಡೆಯುತ್ತಿದ್ದರಿಂದ ಕಡಿಮೆ ಮೊತ್ತದ ನಷ್ಟಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಈ ಮಧ್ಯೆ ಲೆಕ್ಕಚಾರ ನಡೆಸಿದಾಗ ಬರೋಬರಿ 70 ಲಕ್ಷ ರೂ. ವಂಚನೆ ಆಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಠಾಣೆಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಆರೋಪಿಗಳು ಗ್ರಾಹಕರಿಗೆ ಕಳುಹಿಸುತ್ತಿದ್ದ ನಕಲಿ ಶಿಪ್‌ಮೆಂಟ್‌ನಲ್ಲಿರುವ ಎಡಬ್ಲೂéಬಿ (“ಏರ್‌.ವೇ.ಬಿಲ್‌’) ನಂಬರ್‌, ಬ್ಯೂಡಾರ್ಡ್‌ ಕೋರಿಯರ್‌ ಸಬ್‌ಶಿಪರ್‌, ಆದ ನಿಂಬೂಸ್‌ ಪೊಸ್ಟ್‌ರವರ ಮಾಹಿತಿ, ಕೆವೈಸಿ ಮತ್ತು ಬ್ಯಾಂಕ್‌ ಖಾತೆ ಮಾಹಿತಿ ಆಧಾರದ ಮೇಲೆ ಮುಂಬೈ, ಗುಜರಾತ್‌, ಮಧ್ಯಪ್ರದೇಶದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಉತ್ತರ ವಿಭಾಗ ಡಿಸಿಪಿ ಶಿವಪ್ರಕಾಶ್‌ ದೇವರಾಜ್‌, ಮಲ್ಲೇಶ್ವರ ಉಪವಿಭಾಗ ಎಸಿಪಿ ಎಚ್‌.ಕೃಷ್ಣಮೂರ್ತಿ ನೇತೃತ್ವದಲ್ಲಿ ಉತ್ತರ ವಿಭಾಗದ ಸೆನ್‌ ಠಾಣೆ ಇನ್‌ಸ್ಪೆಕ್ಟರ್‌ ಕಾತ್ಯಾಯನಿ ಆಳ್ವ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.

ಎರಡು ದಿನ ಮೊದಲೇ ಡೆಲಿವರಿ:

ಕ್ಯಾಶ್‌ ಆ್ಯಂಡ್‌ ಡೆಲಿವರಿ ಆರ್ಡರ್‌ ಮಾಡುವ ಗ್ರಾಹಕರನ್ನೇ ಗುರಿಯಾಗಿಸುತ್ತಿದ್ದ ಆರೋಪಿಗಳು ಬುಕ್ಕಿಂಗ್‌ ಮಾಡಿದ ವಸ್ತುಗಳ ಬದಲಾಗಿ ನಕಲಿ ವಸ್ತುಗಳನ್ನು ನಿಂಬೂಸ್‌ ಪೊಸ್ಟ್‌, ಎಕ್ಸ್‌ಪ್ರೆàಸ್‌ಬಿ, ಷಡೋಪಾಕ್ಸ್‌, ಬ್ಲೂಡಾರ್ಡ್‌, ಓನ್‌ಡೇ ಕೋರಿಯರ್‌ ಹಾಗೂ ಇತರೆ ಕೋರಿಯರ್‌ ಸರ್ವೀಸ್‌ಗಳ ಮೂಲಕ ಕಳುಹಿಸುತ್ತಿದ್ದರು. ಇನ್ನು ಸಾಮಾನ್ಯವಾಗಿ ಆನ್‌ಲೈನ್‌ನಲ್ಲಿ ವಸ್ತುಗಳ ಆರ್ಡರ್‌ ಮಾಡಿದ ಎರಡೂ¾ರು ದಿನಗಳ ಬಳಿಕ ವಸ್ತುಗಳು ಗ್ರಾಹಕರ ಕೈ ಸೇರುತ್ತವೆ. ಆದರೆ, ಆರೋಪಿಗಳು ಅದಕ್ಕೂ ಮೊದಲೇ ಗ್ರಾಹಕರಿಗೆ ಕೋರಿಯರ್‌ ಮೂಲಕ ವಸ್ತುಗಳನ್ನು ಕಳುಹಿಸಿ ನಗದು ಪಡೆಯುತ್ತಿದ್ದರು. ಈ ವಿಚಾರ ಕೋರಿಯರ್‌ ಸಂಸ್ಥೆಗಳಿಗೂ ಗೊತ್ತಿಲ್ಲ. ಹೀಗಾಗಿ ಕೋರಿಯರ್‌ ಸಂಸ್ಥೆಗಳು ಬ್ಯಾಂಕ್‌ ಖಾತೆ ಮೂಲಕವೇ ಆರೋಪಿಗಳ ಖಾತೆಗೆ ಹಣ ಜಮೆ ಮಾಡುತ್ತಿದ್ದರು. ಎರಡು ದಿನಗಳ ಬಳಿಕ ನೈಜ ವಸ್ತುಗಳು ಗ್ರಾಹಕರ ಬಳಿ ಬಂದಾಗ, ಕೆಲವರು ನಕಲಿ ವಸ್ತುಗಳನ್ನು ಇ-ಕಾರ್ಮಸ್‌ ಪೋರ್ಟಲ್‌ ಮೂಲಕವೇ ವಾಪಸ್‌ ಕಳುಹಿಸಿ, ಹಣ ವಾಪಸ್‌ ಪಡೆಯುತ್ತಿದ್ದರು ಎಂದು ಸೆನ್‌ ಠಾಣೆ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next