Advertisement

ರೈತರ ಹೆಸರಲ್ಲಿ ವಂಚನೆ: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

04:27 PM Oct 10, 2018 | Team Udayavani |

ಯಾದಗಿರಿ: ತಾಲೂಕಿನ ನೀಲಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಉಮೇಶ ಕವಡಿ ಅಮಾಯಕ ರೈತರ ಹೆಸರಿನಲ್ಲಿ ವಂಚನೆ ಮಾಡಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ನೀಲಹಳ್ಳಿ ಗ್ರಾಮದ ರೈತರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಹಾಗೂ
ಸಹಕಾರಿ ಸಚಿವರಿಗೆ ಮನವಿ ಸಲ್ಲಿಸಿದರು. 

Advertisement

ಕಳೆದ 1994ರಿಂದಲೂ ಉಮೇಶ ಕವಡಿ ಇಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ ಪುಡಾರಿಗಳು, ಪಟ್ಟಭದ್ರಹಿತಾಸಕ್ತಿಗಳನ್ನು ಕಟ್ಟಿಕೊಂಡು ಅಮಾಯಕ ರೈತರ ಹೆಸರಿನಲ್ಲಿ ಅವ್ಯವಹಾರ ಮಾಡುತ್ತ ಬಂದಿದ್ದಾರೆ ಎಂದು ರೈತರು ದೂರಿದ್ದಾರೆ.

ಸೆ. 05ರಂದು ಜರುಗಿದ ಸಂಘದ ಮಾಸಿಕ ಸಭೆಯಲ್ಲಿ ಸದಸ್ಯರು ವಿಚಾರಿಸಿದಾಗ, ಸಂಘದಲ್ಲಿ ಸತ್ತವರ ಹೆಸರನ್ನು ನಮೂದಿಸಿ ತಾನೇ ಹಣವನ್ನು ಎತ್ತಿ ಹಾಕಿದ್ದಾನೆ. ಇದನ್ನು ಕೇಳಿದರೆ ನಾನೇ ಹಣ ತೆಗೆದುಕೊಂಡಿದ್ದೇನೆ ಏನು ಮಾಡಿಕೊಳ್ಳುತ್ತೀರಿ ಮಾಡಿಕೊಳ್ಳಿ ಎಂದು ನಿರ್ದೇಶಕ ಬಸವರಾಜಪ್ಪ ಗೌಡಗೇರಿಗೆ ಉಡಾಫೆ ಉತ್ತರ ನೀಡಿ,
ನನಗೇನು ಅಂಜಿಕೆ ಇಲ್ಲ, ಏನು ಮಾಡಿಕೊಳ್ಳುತ್ತೀರಿ ಮಾಡಿಕೊಳ್ಳಿ ಹೋಗಿ ಎಂದು ಗದರಿಸಿ ಅವಾಜ್‌ ಹಾಕಿದ್ದಾನೆಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ದೂರಿನಲ್ಲಿ ಉಲ್ಲೇಖೀಸಲಾಗಿದೆ.

ಈಗಾಗಲೇ ಸಂಬಂಧಪಟ್ಟ ಅಧಿಕಾರಿಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಈ ಘಟನೆ ಬಗ್ಗೆ ತನಿಖಾ ತಂಡ ರಚಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹಂತ ಹಂತವಾಗಿ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಟೋಕರಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಕೆ. ಮುದ್ನಾಳ ಎಚ್ಚರಿಸಿದ್ದಾರೆ. 

ಈ ಸಂದರ್ಭದಲ್ಲಿ ಬಸವರಾಜ ನಾಯಕ, ಸದಾಶಿವರಡ್ಡಿ ಪಾಟೀಲ, ಸಾಬಣ್ಣ ಎಸ್‌, ನರಸಪ್ಪ, ಬಸವರಾಜ, ಮಲ್ಲಪ್ಪ,
ಭೀಮರಾಯ, ಸಿದ್ರಾಮಪ್ಪ, ಶಿವಶಂಕರ ಎಸ್‌. ಬಾಗ್ಲಿ, ಮುದ್ದಣ್ಣಗೌಡ, ಕಾಶಪ್ಪ, ಸಾಬಣ್ಣ ಆರ್‌, ಶ್ರೀನಿವಾಸ ನಾಯಕ,
ತಿಪ್ಪಣ್ಣ, ಯಂಕಪ್ಪ, ಸೂಗಪ್ಪ, ಖತಲಪ್ಪ ಸೇರಿದಂತೆ ಅನೇಕ ರೈತರು ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next