Advertisement

ಉಟಕನೂರು ತಾತನ ಹೂವಿನ ರಥೋತ್ಸವ

10:21 AM Jan 29, 2019 | |

ಬಳಗಾನೂರು: ಸಮೀಪದ ಸುಕ್ಷೇತ್ರ ಉಟಕನೂರು ಶ್ರೀ ಅಡವಿಸಿದ್ದೇಶ್ವರ ಮಠದ ಶ್ರೀ ಮರಿಬಸವಲಿಂಗ ದೇಶಿಕೇಂದ್ರ ಶಿವಯೋಗಿಗಳ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ಸಂಜೆ ಸಾವಿರಾರು ಭಕ್ತರ ಮಧ್ಯೆ, ವಾದ್ಯವೈಭವದೊಂದಿಗೆ ಹೂವಿನ ರಥೋತ್ಸವ ಅದ್ಧೂರಿಯಾಗಿ ನಡೆಯಿತು.

Advertisement

ಬಳಗಾನೂರು ವಿರಕ್ತಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ನಿಲೋಗಲ್‌ದ ಶ್ರೀ ಪಂಚಾಕ್ಷರಿ ಸ್ವಾಮೀಜಿ, ಗೌಡನಬಾವಿ ಶ್ರೀ ನಾಗಪ್ಪತಾತನವರು, ಶ್ರೀಮಠದ ಪೀಠಾಧಿಪತಿ ಶ್ರೀ ಮರಿಬಸವರಾಜ ದೇಶಿಕೇಂದ್ರ ಸ್ವಾಮೀಜಿ ಹಾಗೂ ವಿವಿಧ ಮಠಗಳ ಶ್ರೀಗಳು ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ರಥಕ್ಕೆ ಉತ್ತತ್ತಿ, ಹಣ್ಣು, ಹೂ ತೂರಿ ನಮಿಸಿ ಜೈಘೋಷ ಕೂಗಿದರು.

ರಥೋತ್ಸವ ಪ್ರಯುಕ್ತ ಬೆಳಗ್ಗೆ ಶ್ರೀ ಮರಿಬಸವಲಿಂಗ ದೇಶಿಕೇಂದ್ರ ಶಿವಯೋಗಿಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರತಿ, ವಿವಿಧ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ನಂತರ ಸುಮಂಗಲೆಯರಿಗೆ ಉಡಿ ತುಂಬಲಾಯಿತು. ಬಳಿಕ ನಂದಿಕೋಲು, ವೀರಗಾಸೆ ನೃತ್ಯ, ಭಜನೆ, ಡೊಳ್ಳು ವಿವಿಧ ವಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಮರಿಬಸವಲಿಂಗ ದೇಶಿಕೇಂದ್ರ ಶಿವಯೋಗಿಗಳ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಸುಮಂಗಲೆಯರು ಕುಂಭದೊಂದಿಗೆ ಭಾಗವಹಿಸಿದ್ದರು. ಹರಕೆ ಹೊತ್ತ ಭಕ್ತರು ದೀಡ್‌ ನಮಸ್ಕಾರ ಹಾಕಿದರು.

ರಥೋತ್ಸವದಲ್ಲಿ ವೀರಗಾಸೆ, ಶಹನಾಯಿ ವಾದ್ಯ, ಡೊಳ್ಳಿನ ಮೇಳ ಸೇರಿದಂತೆ ವಿವಿಧ ವಾದ್ಯ ವೃಂದದವರು ಭಾಗವಹಿಸಿದ್ದರು. ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸ್ಥಳೀಯ ಕಲಾವಿದರಿಂದ ನರನಾಗರ ಸಾಮಾಜಿಕ ನಾಟಕ ಪ್ರದರ್ಶನ ನಡೆಯಿತು.

ಸಿದ್ದಯ್ಯಸ್ವಾಮಿ, ಬಸವರಾಜಪ್ಪಗೌಡ, ವೆಂಕನಗೌಡ ತಡಕಲ್‌, ಸಂಗಣ್ಣ ಮಾಕಾಪುರ, ರುದ್ರಪ್ಪ ಮರೆಡ್ಡಿ, ಬಸಪ್ಪ ಗಬ್ಬೂರು, ಸೇರಿದಂತೆ ಉಟಕನೂರು, ಸುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.

Advertisement

ಬಂದೋಬಸ್ತ್: ಜಾತ್ರಾ ಮಹೋತ್ಸವ ನಿಮಿತ್ತ ಕವಿತಾಳ ಪಿಎಸ್‌ಐ ಅಮರೇಶ, ಬಳಗಾನೂರು ಠಾಣೆ ಪಿಎಸ್‌ಐ ಎಂ. ಶಶಿಕಾಂತ ನೇತೃತ್ವದಲ್ಲಿ ಸಿಬ್ಬಂದಿ ಟ್ರಾಫಿಕ್‌ ಸಮಸ್ಯೆಯಾಗದಂತೆ ಕ್ರಮ ವಹಿಸಿದ್ದರು. ಗ್ರಾಮದ ಹೊರವಲಯದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು.

ಕೆಎಫ್‌ಡಿ ನಿಯಂತ್ರಣಕ್ಕೆ ಕ್ರಮ
ಜಿಲ್ಲೆಯಲ್ಲಿ ಮಂಗನಕಾಯಿಲೆ ಉಲ್ಬಣ ತಡೆಯಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆಸ್ಪತ್ರೆಗಳಿಗೆ ಅಗತ್ಯವಾದ ಸೌಲಭ್ಯಗಳನ್ನು ಮಂಡಳಿಯ ವತಿಯಿಂದ ಒದಗಿಸಲಾಗುವುದು. ಇದಕ್ಕಾಗಿ ಮತ್ತಷ್ಟು ಅನುದಾನ ತರಲಾಗುವುದು. ಒಟ್ಟಿನಲ್ಲಿ ಕಾಯಿಲೆ ಹತೋಟಿಗೆ ಎಲ್ಲ ರೀಠಿತಿಯ ಕಾರ್ಯಕ್ರಮಗಳನ್ನು ಮಂಗಳವಾರದಿಂದಲೇ ಆರಂಭಿಸಲಾಗುವುದು ಎಂದು ನೂತನ ಅಧ್ಯಕ್ಷರು ತಿಳಿಸಿದರು.

ಮಂಡಳಿ ಕಾರ್ಯ ವ್ಯಾಪ್ತಿ
ಎಂಎಡಿಬಿಯಲ್ಲಿ ಒಟ್ಟು 137 ಸದಸ್ಯರಿದ್ದಾರೆ. ಇದರಲ್ಲಿ ಈ ವ್ಯಾಪ್ತಿಯ 12 ಲೋಕಸಭಾ ಸದಸ್ಯರು, 65 ವಿಧಾನಸಭಾ ಸದಸ್ಯರು, 23 ವಿಧಾನ ಪರಿಷತ್‌ ಸದಸ್ಯರು, 13 ಜಿಲ್ಲಾ ಪಂಚಾಯತ್‌ ಅಧ್ಯಕ್ಷರು, ಸರ್ಕಾರದಿಂದ ನೇಮಕಗೊಳ್ಳುವ 10 ಸದಸ್ಯರು, ಈ ವ್ಯಾಪ್ತಿಯ 10 ಜಿಲ್ಲಾಧಿಕಾರಿಗಳು ಹಾಗೂ ಮಂಡಳಿಯ ಕಾರ್ಯದರ್ಶಿ ಅವರು ಒಳಗೊಂಡಿದ್ದಾರೆ. ಮಂಡಳಿಗೆ 2018- 19 ನೇ ಸಾಲಿನಲ್ಲಿ ಸರಕಾರ 27 ಕೋಟಿ ರೂ. ಬಿಡುಗಡೆ ಮಾಡಿದೆ. ಬಾಕಿ ಅನುದಾನ ಸೇರಿದಂತೆ ಪ್ರಸ್ತುತ 52 ಕೋಟಿ ರೂ. ಮಂಡಳಿಯಲ್ಲಿ ಲಭ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next