Advertisement
ಗುರುಮಠಕಲ್ ತಾಲೂಕಿನ ಸಿದ್ಧಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ಶ್ರೀ ಮಾತಾ ಮಾಣೀಕೇಶ್ವರಿ ಆಶ್ರಮದಲ್ಲಿ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಅರ್ಹ ಫಲಾನುಭವಿಗಳಿಗೆ ಅವರ ಮನೆ ಬಾಗಿಲಿಗೆ ಸರ್ಕಾರಿ ಶುಲ್ಕದಲ್ಲಿಯೇ ನೀಡಲಾದ ಸರ್ಕಾರಿ ಕಾರ್ಮಿಕ ಕಾರ್ಡ್ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರುಮಾತನಾಡಿದರು. ಕೂಲಿ ಕಾರ್ಮಿಕರನ್ನು ಇಂದು ಮಧ್ಯವರ್ತಿಗಳು, ದಲ್ಲಾಳಿಗಳು ಸುಲಿಗೆ ಮಾಡುತ್ತಿದ್ದು, ಇದನ್ನು ತಡೆಯಲು ಸಂಘದ ವತಿಯಿಂದ ಕಾರ್ಡ್ ವಿತರಣೆ ಹಮ್ಮಿಕೊಂಡಿರುವುದು ಮಾದರಿಯಾಗಿದೆ.
ತಿಳಿಸಿದ ಅವರು, ಕಾರ್ಮಿಕರ ಶೋಷಣೆ ಕಂಡು ಬಂದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ಇಲ್ಲವೇ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಮನವಿ ಮಾಡಿದರು. ಸಮಾರಂಭದಲ್ಲಿ ಮಹಾದೇವ, ಭೀಮು, ಶರಣಪ್ಪ, ಶಿವಪ್ಪ ಹಾಗೂ ಕೂಲಿ ಕಾರ್ಮಿಕ ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.