Advertisement

Fraud Case ಕ್ಯಾಟರಿಂಗ್‌ ವ್ಯವಹಾರದ ಕಮಿಷನ್‌ ಹೆಸರಲ್ಲಿ ವಂಚನೆ

11:35 AM Jul 27, 2024 | Team Udayavani |

ಉಡುಪಿ: ಕ್ಯಾಟರಿಂಗ್‌ ವ್ಯವಹಾರದ ಕಮಿಷನ್‌ ನೀಡುವುದಾಗಿ ತಿಳಿಸಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿ, ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.

Advertisement

ಅಜ್ಜರಕಾಡು ನಿವಾಸಿ ವಿಲ್ಸನ್‌ ಸಿಕ್ವೇರಾ ಅವರಿಗೆ ಅವರ ಪರಿಚಯಸ್ಥ ರಾಜೇಶ್‌ ಪಿಂಟೋ ವಂಚಿಸಿರುವುದಾಗಿ ಆರೋಪಿಸಲಾಗಿದೆ.

ಆರೋಪಿಯು ವಿಲ್ಸನ್‌ಗೆ ವಿವಿಧ ದಿನಾಂಕದಂದು 1 ಲಕ್ಷ ರೂ., 2 ಲಕ್ಷ ರೂ., 1,00,000 ರೂ., 20 ಲಕ್ಷ ರೂ., 15 ಲಕ್ಷ ರೂ. ಮತ್ತು 15 ಲಕ್ಷ ರೂ. ಹೀಗೆ ಒಟ್ಟು 54 ಲಕ್ಷ ರೂ.ಗಳ ಚೆಕ್‌ಗಳನ್ನು ನೀಡಿದ್ದು, ಅವು ಅಮಾನ್ಯವಾಗಿವೆ. ಇದನ್ನು ಕೇಳಿದಾಗ ನಿಂದಿಸಿ, ಜೀವಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ. ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next