ಬೆಂಗಳೂರು: ಕ್ರೆಡಿಟ್ ಕಾರ್ಡ್ ಸಾಲ ಕೊಡುವುದಾಗಿ ವ್ಯಕ್ತಿಯೊಬ್ಬರಿಗೆ ನಂಬಿಸಿದ ಸೈಬರ್ ವಂಚಕರು ಓಟಿಪಿ ಪಡೆದು ಸಾವಿರಾರು ದೋಚಿದ್ದಾರೆ.
ಈ ಸಂಬಂಧ ಕೋಣನಕುಂಟೆ ನಿವಾಸಿ ವಿ.ಮುರಳಿ ಎಂಬವರು ನೀಡಿದ ದೂರಿನ ಮೇರೆಗೆ ದಕ್ಷಿಣ ವಿಭಾಗದ ಸೆನ್ ಠಾಣೆ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಸಿ, ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ;-ಸಂಸದೆ ಸುಮಲತಾ ಸೋದರ ಸಂಬಂಧಿಗೆ ಜೀವ ಬೆದರಿಕೆ..!
ಮುರಳಿ ಅವರು ಬ್ಯಾಂಕ್‌ವೊಂದರ ಕ್ರೆಡಿಟ್ ಕಾರ್ಡ್ ಹೊಂದಿದ್ದು, ನ.10ರಂದು ಅಪರಿಚಿತರು ಅವರ ಮೊಬೈಲ್‌ಗೆ ಕರೆ ಮಾಡಿ, ಬ್ಯಾಂಕ್‌ನಿಂದ ಮಾತನಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಬಳಿಕ ಕ್ರೆಡಿಟ್ ಕಾರ್ಡ್‌ಗೆ ಎರಡು ಲಕ್ಷ ರೂ. ಸಾಲದ ಮಂಜೂರಾತಿ ಆಗಲಿದೆ ಎಂದು ನಂಬಿಸಿದ್ದು, ಒಟಿಪಿ ಪಡೆದು ಹಂತ-ಹಂತವಾಗಿ ಮುರಳಿ ಅವರು ಖಾತೆ ಯಲ್ಲಿದ್ದ 52,550 ರೂ. ಹಣ ಹಾಕಿಸಿಕೊಂಡು ವಂಚಿಸಿದ್ದಾರೆ. ಈ ಸಂಬಂಧ ಮುರಳಿ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.