Advertisement
ಈ ಸಂಬಂಧ ಹೈಕೋರ್ಟ್ ಮೊರೆ ಹೋಗಿದ್ದು, ತಕ್ಷಣ ಬಿಡುಗಡೆಗೆ ಹೈಕೋರ್ಟ್ ಆದೇಶಿಸಿದೆ. ಬೆಂಗಳೂರಿನ ರಾಜರಾಜೇಶ್ವರಿ ಠಾಣೆ ಯಲ್ಲಿ ದಾಖಲಾಗಿರುವ ಎಫ್ಐಆರ್ ಸಂಬಂಧ ಬಂಧಿಸಿರುವುದನ್ನು ಪ್ರಶ್ನಿಸಿ ಐಶ್ವರ್ಯಾ ಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿತು. ಹಾಗೆಯೇ ನ್ಯಾಯಾಲ ಯವು ರಾಜ್ಯ ಸರ್ಕಾರ ಮತ್ತು ದೂರುದಾರೆ ಶಿಲ್ಪಾಗೌಡ ಅವರಿಗೆ ನೋಟಿಸ್ ಜಾರಿ ಮಾಡಿದೆ. ವಿಚಾರಣೆಯನ್ನು ಫೆಬ್ರವರಿ 27ಕ್ಕೆ ಮುಂದೂಡಿದೆ.
Related Articles
Advertisement
ಡಿ.ಕೆ.ಸುರೇಶ್ ಹೆಸರು ಹೇಳಿ ವಂಚಿಸಿದ ಇನ್ನೊಂದು ಪ್ರಕರಣ:
ಬೆಂಗಳೂರು: ದೂರುದಾರೆ ಶಿಲ್ಪಾ ಗೌಡಗೆ ಎರಡು ವರ್ಷದ ಹಿಂದೆ ಪರಿಚಯವಾಗಿದ್ದ ಐಶ್ವರ್ಯಾಗೌಡ, ತಾನು ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ತಂಗಿ ಎಂದು ಹೇಳಿ ಕೊಂಡಿದ್ದರು. ತಾನು ಗೋಲ್ಡ್ ಬಿಜಿನೆಸ್, ಚಿಟ್ ಫಂಡ್ ವ್ಯವಹಾರ, ವಿಲ್ಲಾ ನಿರ್ಮಾಣ, ರಿಯಲ್ ಎಸ್ಟೇಟ್ ವ್ಯವಹಾರ ಮಾಡು ತ್ತಿದ್ದೇನೆ. ಎಲ್ಲಾ ವ್ಯವಹಾರಗಳು ಲಾಭದಾಯ ಕವಾಗಿದ್ದು, ನೀವು ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಪಡೆಯ ಬಹುದು ಎಂದು ಶಿಲ್ಪಾ ಗೌಡರನ್ನು ನಂಬಿಸಿ ದ್ದರು. ಅಲ್ಲದೆ, ನನಗೆ ರಾಜ ಕಾರಣಿಗಳ ಬೆಂಬಲ ವಿದೆ. ನಿನಗೆ ಒಂದು ಗತಿ ಕಾಣಿಸುತ್ತೇನೆ. ಮಾನ-ಮರ್ಯಾದೆ ತೆಗೆಯುತ್ತೇನೆ ಎಂದು ಬೆದರಿಸಿದ್ದರು ಎಂದು ಶಿಲ್ಪಾ ಗೌಡ ದೂರಿನಲ್ಲಿ ಆರೋಪಿಸಿದ್ದರು.