Advertisement

ಪೇಯಿಂಗ್‌ ಗೆಸ್ಟ್‌ ಹುಡುಕಿಕೊಡುವ ನೆಪದಲ್ಲಿ 42 ಸಾವಿರ ವಂಚನೆ

01:13 PM Nov 19, 2022 | Team Udayavani |

ಬೆಂಗಳೂರು: ಅಂತರ್ಜಾಲದಲ್ಲಿ ಪೇಯಿಂಗ್‌ ಗೆಸ್ಟ್‌ ಹುಡುಕಿದ ಯುವತಿಯೊಬ್ಬಳು ಸೈಬರ್‌ ಕಳ್ಳರ ಗಾಳಕ್ಕೆ ಸಿಲುಕಿ 42 ಸಾವಿರ ರೂ. ಕಳೆದುಕೊಂಡಿದ್ದಾಳೆ.

Advertisement

ಕುವೆಂಪುನಗರದ ನಿವಾಸಿ ಪಾಂಡೆ ಶ್ರೇಯಾ ಅನಿಲ್‌ (24) ಹಣ ಕಳೆದುಕೊಂಡ ಯುವತಿ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶ್ರೇಯಾ ಬೆಂಗಳೂರಿನಲ್ಲಿ ಪಿಜಿಯಲ್ಲಿ ಉಳಿದುಕೊಳ್ಳಲು ಮುಂದಾಗಿದ್ದರು. ಈ ಸಲುವಾಗಿ ಅಂತಾರ್ಜಾಲದಲ್ಲಿ ಪಿಜಿಗಾಗಿ ಹುಡುಕಾಡಿದ್ದರು.

ಅಲ್ಲಿ ಸಿಕ್ಕಿದ ಮೊಬೈಲ್‌ ನಂಬರ್‌ಗೆ ಕರೆ ಮಾಡಿ ವಿಚಾರಿಸಿದಾಗ ನಿಮಗೆ ಒಳ್ಳೆಯ ಪಿಜಿ ಕೊಡುತ್ತೇವೆ ಎಂದು ನಂಬಿಸಿದ ಅಪರಿಚಿತರು ಮುಂಗಡ ಹಣ ಹಾಗೂ ಜಿಎಸ್‌ಟಿ ಶುಲ್ಕವನ್ನು ಮುಂಗಡವಾಗಿ ಪಾವತಿಸುವಂತೆ ಸೂಚಿಸಿದ್ದರು.

ಅದರಂತೆ ಶ್ರೇಯಾ ಅವರು ಕೊಟ್ಟ ಬ್ಯಾಂಕ್‌ ಖಾತೆಗೆ ಹಂತ-ಹಂತವಾಗಿ 42 ಸಾವಿರ ರೂ. ಜಮೆ ಮಾಡಿದ್ದರು. ನಂತರ ಅಪರಿಚಿತರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಆ ವೇಳೆ ಇದು ಸೈಬರ್‌ ಕಳ್ಳರ ಕೈ ಚಳಕ ಎಂಬುದು ಶ್ರೇಯಾ ಗಮನಕ್ಕೆ ಬಂದು ಸೈಬರ್‌ ಕ್ರೈಂ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next