Advertisement
ವಂಚಕರು ಹಿರಿಯ ಅಧಿಕಾರಿಗಳ ವಾಟ್ಸ್ ಆ್ಯಪ್ ಪ್ರೊಫೈಲ್‌ನ ಫೋಟೋವನ್ನು ತೆಗೆದು ನಕಲಿ ಪ್ರೊಫೈಲ್ ಸೃಷ್ಟಿಸಿ ಅದರ ಮೂಲಕ ಕೆಳ ಹಂತದ ಅಧಿಕಾರಿಗಳಿಗೆ ಕಳುಹಿಸುತ್ತಿದ್ದಾರೆ. ತಮ್ಮನ್ನು ಹಿರಿಯ ಅಧಿಕಾರಿ ಎಂದೇ ಪರಿಚಯಿಸಿಕೊಂಡು “ನಾನು ಬ್ಯುಸಿಯಾಗಿದ್ದೇನೆ.
ಕೆಲವೊಮ್ಮೆ ನಕಲಿ ವಾಟ್ಸ್ ಆ್ಯಪ್ ಪ್ರೊಫೈಲ್ ಮೂಲಕ ವಂಚಕರು ತಮ್ಮನ್ನು ಮೇಲಧಿಕಾರಿಗಳೆಂದು ಪರಿಚಯಿಸಿಕೊಂಡು ಕೆಳ ಅಧಿಕಾರಿಗಳಿಗೆ “ನೀವು ಒಂದು ಸಂಖ್ಯೆಯನ್ನು ಸಂಪರ್ಕಿಸಿ ಅವರಿಂದ ಅಮೆಜಾನ್ ಪೇ ಗಿಫ್ಟ್ ಕಾರ್ಡ್ ಖರೀದಿಸಿ’ ಎಂಬ ಸಂದೇಶ ಕೂಡ ಕಳುಹಿಸುತ್ತಾರೆ. ಹೆಚ್ಚಾಗಿ ಸಚಿವಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮೇಲಧಿಕಾರಿಗಳ ನಕಲಿ ಪ್ರೊಫೈಲ್ ಬಳಸಿ ಕೆಳ ಅಧಿಕಾರಿಗಳನ್ನು ಈ ರೀತಿ ವಂಚಿಸಲಾಗುತ್ತಿರುವುದು ಬೆಳಕಿಗೆ ಬರುತ್ತಲಿದೆ. ಈ ಬಗ್ಗೆ ಅಧಿಕಾರಿ ವರ್ಗದವರು ಜಾಗೃತವಾಗಿರಬೇಕು ಎಂದು ಸೈಬರ್ ಪೊಲೀಸರು ಎಚ್ಚರಿಸಿದ್ದಾರೆ.