Advertisement

ಫೇಸ್‌ಬುಕ್‌ ಯುವತಿಯ ಮಾತಿನ ಮೋಡಿಗೆ ಮರುಳಾದ ಯುವಕ: 1.8 ಲಕ್ಷ ರೂ ಕಳೆದುಕೊಂಡ

01:25 PM Sep 02, 2022 | Team Udayavani |

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವತಿಯ ಮಾತಿನ ಮೋಡಿಗೆ ಮರುಳಾದ ಯುವಕನೊಬ್ಬ ಆಕೆಯ ಪ್ರೀತಿಯ ಬಲೆಗೆ ಸಿಲುಕಿ ಇದೀಗ 1.8 ಲಕ್ಷ ರೂ. ಕಳೆದುಕೊಂಡಿದ್ದು, ಇದೀಗ ಪೇಚಿಗೆ ಸಿಲುಕಿ ಸೈಬರ್‌ ಕ್ರೈಂ ಠಾಣೆ ಮೆಟ್ಟಿಲೇರಿದ್ದಾನೆ.

Advertisement

ಜರಗನಹಳ್ಳಿಯ ನಿವಾಸಿ ಪವನ್‌ ಕುಮಾರ್‌ (34) ವಂಚನೆ ಗೊಳಗಾದ ಯುವಕ. ವಿದೇಶಿ ಮಹಿಳೆ ಕೇಟೀ ಮದೀನಾ ಎಂಬಾಕೆ ಖಾಸಗಿ ಕಂಪನಿ ಉದ್ಯೋಗಿ ಪವನ್‌ ಕುಮಾರ್‌ಗೆ ಆ.16ರಂದು ಫೇಸ್‌ಬುಕ್‌ನಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದಳು. ಇದನ್ನು ಸ್ವೀಕರಿಸಿದ್ದ ಪವನ್‌ ಆಕೆಯ ಜತೆಗೆ ಚಾಟ್‌ ಮಾಡಿದ್ದ. ಇಷ್ಟಕ್ಕೆ ಸುಮ್ಮನಾಗದ ಮದೀನಾ ದೂರುದಾರ ಯುವಕನ ಜತೆಗೆ ಸಲುಗೆಯಿಂದ ಆತ್ಮೀಯವಾಗಿ ಮಾತನಾಡಿದ್ದಳು. ಆಕೆಯ ಮಾತಿನ ಮೋಡಿಗೆ ಮರುಳಾದ ಪವನ್‌ ತನ್ನ ವೈಯಕ್ತಿಕ ಮಾಹಿತಿಯನ್ನು ಆಕೆಯ ಜತೆ ಹಂಚಿಕೊಂಡಿದ್ದ.

ಇದನ್ನೂ ಓದಿ:ರಾಷ್ಟ್ರೀಯ ಭಾಷೆಯಾಗಿ ಸಂಸ್ಕೃತ: ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಆ.23 ರಂದು ಪವನ್‌ಗೆ ಕರೆ ಮಾಡಿದ ಮದೀನಾ, ನಾನು ನಿನ್ನನ್ನು ಕಾಣಲು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದು, ನನ್ನ ದೇಶದ ಕರೆನ್ಸಿಯನ್ನು ಇಲ್ಲಿ ತೆಗೆದುಕೊಳ್ಳುತ್ತಿಲ್ಲ. ದಯವಿಟ್ಟು ಏರ್‌ಫೋರ್ಟ್‌ ಅಧಿಕಾರಿಗಳ ಬ್ಯಾಂಕ್‌ ಖಾತೆಗೆ ಹಣ ಹಾಕಿದರೆ, ನಾನು ನಿನ್ನನ್ನು ಭೇಟಿಯಾಗಬಹುದು. ಆಗ ನಿನ್ನ ಹಣವನ್ನು ಹಿಂತಿರುಗಿಸುತ್ತೇನೆ’ ಎಂದು ನಂಬಿಸಿದ್ದಳು. ಆಕೆಯ ಸೂಚನೆಯಂತೆ ಪವನ್‌ ಆಕೆ ಕೊಟ್ಟ ಬ್ಯಾಂಕ್‌ ಖಾತೆಗೆ ಹಂತ-ಹಂತವಾಗಿ 1.8 ಲಕ್ಷ ರೂ. ಜಮೆ ಮಾಡಿದ್ದ. ನಂತರ ಮಹಿಳೆಯು ಪವನ್‌ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇತ್ತ ಪವನ್‌ ಪರಿಚಿತರ ಬಳಿ ಈ ವಿಚಾರ ಹೇಳಿದಾಗ ಇದು ಸೈಬರ್‌ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next