Advertisement

Frank Duckworth: ‘ಡಿಎಲ್‌ಎಸ್‌ ನಿಯಮ’ದ  ಫ್ರಾಂಕ್‌ ಡಕ್‌ವರ್ತ್‌ ನಿಧನ

08:52 PM Jun 25, 2024 | Team Udayavani |

ಲಂಡನ್‌: ಇಂಗ್ಲೆಂಡ್‌ನ‌ ಖ್ಯಾತ ಅಂಕಿಅಂಶ ತಜ್ಞ ಹಾಗೂ ಕ್ರಿಕೆಟಿನ ಡಕ್‌ವರ್ತ್‌-ಲೂಯಿಸ್‌-ಸ್ಟರ್ನ್ (ಡಿಎಲ್‌ಎಸ್‌) ನಿಯಮವನ್ನು ರೂಪಿಸಿದವರಲ್ಲಿ ಒಬ್ಬರಾದ ಫ್ರ್ಯಾಂಕ್‌ ಡಕ್‌ವರ್ತ್‌ (84) ನಿಧನರಾಗಿದ್ದಾರೆ. ಅವರು ಜೂ. 21ರಂದು ಕೊನೆಯುಸಿರು ಎಳೆದರು ಎಂಬುದಾಗಿ ವರದಿಯಾಗಿದೆ.

Advertisement

ಮಳೆ ಪಂದ್ಯದ ಟಾರ್ಗೆಟ್‌ ಮರು ನಿಗದಿಗೊಳಿಸುವ ಡಕ್‌ವರ್ತ್‌-ಲೂಯಿಸ್‌ ನಿಯಮವನ್ನು ಫ್ರ್ಯಾಂಕ್‌ ಡಕ್‌ವರ್ತ್‌ ಅವರು ಮತ್ತೋರ್ವ ಅಂಕಿಅಂಶ ತಜ್ಞ ಟೋನಿ ಲೂಯಿಸ್‌ ಅವರೊಂದಿಗೆ ಸೇರಿ ರೂಪಿಸಿದ್ದರು. ಇದನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1997ರಲ್ಲಿ ಮೊದಲ ಬಾರಿ ಜಾರಿಗೆ ತರಲಾಗಿತ್ತು. ಬಳಿಕ ಐಸಿಸಿ 2001ರಲ್ಲಿ ಇದನ್ನು ಅಧಿಕೃತಗೊಳಿಸಿತು. 2014ರಲ್ಲಿ ಆಸ್ಟ್ರೇಲಿಯಾದ ಅಂಕಿಅಂಶ ತಜ್ಞ ಸ್ಟೀವನ್‌ ಸ್ಟರ್ನ್ ಇದನ್ನು ಪರಿಷ್ಕರಿಸಿದ ಬಳಿಕ ಇದಕ್ಕೆ ಡಿಎಲ್‌ಎಸ್‌ ನಿಯಮ’ ಎಂದು ಹೆಸರಿಡಲಾಯಿತು.

ಮಳೆ ನಿಯಮವೊಂದು 1992ರ ಏಕದಿನ ವಿಶ್ವಕಪ್‌ ವೇಳೆ ಮೊದಲ ಸಲ ಜಾರಿಗೆ ಬಂದಿತ್ತು. ಇದು ರಿಚೀ ಬೆನೊ ಮೊದಲಾದ ಪರಿಣಿತರು ಸೇರಿಕೊಂಡು ರೂಪಿಸಿದ ನಿಯಮವಾಗಿತ್ತು. ಇದಕ್ಕೆ ಮೊದಲು ಬಲಿಯಾದ ತಂಡ ದಕ್ಷಿಣ ಆಫ್ರಿಕಾ. ಈ ನಿಯಮದ ಜಾಗಕ್ಕೆ ಡಿಎಲ್‌ಎಸ್‌ ನಿಯಮದ ಪ್ರವೇಶವಾಯಿತು. ಇದು ಇಂದಿಗೂ ಜಾರಿಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next