ಪ್ಯಾರಿಸ್: ಯುರೋಪ್ ರಾಷ್ಟ್ರಗಳಲ್ಲಿ ಈಗ ಕೋವಿಡ್ ಸೋಂಕಿನ 2ನೇ ಅಲೆಯ ಅಬ್ಬರಕ್ಕೆ ತುತ್ತಾಗಿದ್ದು, ಈ ಹಿನ್ನೆಲೆಯಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ದೇಶಾದ್ಯಂತ ಮತ್ತೆ ಡಿಸೆಂಬರ್ 1ರವರೆಗೆ ಲಾಕ್ ಡೌನ್ ಹೇರಿದೆ.
2ನೇ ಹಂತದ ಕೋವಿಡ್ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಫ್ರಾನ್ಸ್ ನಲ್ಲಿ ಎರಡನೇ ಬಾರಿ ಲಾಕ್ ಡೌನ್ ಹೇರಲಾಗಿದೆ. ಕೋವಿಡ್ ಸೋಂಕು ದೇಶಾದ್ಯಂತ ಕ್ಷಿಪ್ರವಾಗಿ ಹರಡುತ್ತಿದ್ದು, ಇದು ಯಾವ ಹಂತಕ್ಕೆ ತಲುಪಬಹುದು ಎಂಬುದನ್ನು ಊಹಿಸಲು ಸಾಧ್ಯವಿಲ್ಲ ಎಂದು ಮ್ಯಾಕ್ರನ್ ಟೆಲಿವಿಷನ್ ನಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡುತ್ತ ತಿಳಿಸಿದರು.
ಪ್ಯಾರಿಸ್ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಕೋವಿಡ್ 2ನೇ ಹಂತದ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಎರಡು ವಾರಗಳ ಹಿಂದೆ ಕರ್ಫ್ಯೂ ಹಾಕಿದ್ದರು ಕೂಡಾ ಅದು ವಿಫಲವಾಗಿರುವುದಾಗಿ ಮ್ಯಾಕ್ರನ್ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ:ಮೈಸೂರು ನಿವೃತ್ತ ಪ್ರಾಂಶುಪಾಲ ಹತ್ಯೆ ಪ್ರಕರಣ : ಸುಪಾರಿ ಹಂತಕರು ಸೇರಿ ಐವರ ಬಂಧನ
ಫ್ರಾನ್ಸ್ ನಲ್ಲಿ ಕೋವಿಡ್ ಸೋಂಕಿಗೆ ಈಗಾಗಲೇ 35 ಸಾವಿರ ದಾಟಿದೆ. ಯುರೋಪ್ ನ ಇತರ ಭಾಗದಲ್ಲಿಯೂ ಎರಡನೇ ಹಂತದ ಕೋವಿಡ್ ಸೋಂಕು ಮೊದಲ ಹಂತಕ್ಕಿಂತ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇದ್ದಿರುವುದಾಗಿ ಮ್ಯಾಕ್ರನ್ ಆತಂಕ ವ್ಯಕ್ತಪಡಿಸಿದ್ದಾರೆ.