Advertisement
ಕೊಪ್ಪಳ ಜಿಲ್ಲೆಯನ್ನು ಗ್ರೀನ್ ಝೋನ್ ಗೆ ಸೇರ್ಪಡೆ ಮಾಡಿದ ನಂತರ ಗಂಗಾವತಿಯಲ್ಲಿ ವ್ಯಾಪಾರ ವಹಿವಾಟು ನಡಸಲು ಲಾಕ್ ಡೌನ್ ಸಡಿಲಿಸಲಾಗಿದೆ. ಸಾಮಾಜಿಕ ಅಂತರ ಮತ್ತು ಕೋವಿಡ್ ಸುರಕ್ಷತಾ ಕ್ರಮಗಳ ಮುನ್ನೆಚ್ಚರಿಕೆ ಮಧ್ಯ ನಗರದಲ್ಲಿ ಬಟ್ಟೆ ಅಂಗಡಿಗಳನ್ನು ಆರಂಭಿಸಲು ಪರವಾನಿಗೆ ನೀಡಲಾಗಿದೆ.
ಇನ್ನೊಂದೆಡೆ ಬಟ್ಟೆ ಅಂಗಡಿಗಳಲ್ಲಿ ಗ್ರಾಹಕರ ದಟ್ಟಣೆಯೂ ಹೆಚ್ಚಾಗಿದೆ. ನಗರ ಮತ್ತು ಗ್ರಾಮೀಣ ಭಾಗದಿಂದ ಜನರು ಬಟ್ಟೆ ಖರೀದಿಗೆ ಆಗಮಿಸುತ್ತಿದ್ದಾರೆ ಮತ್ತು ಇವರಲ್ಲಿ ಯಾರಾದರೂ ಸೋಂಕು ಪೀಡಿತರಿದ್ದರೆ ಅಥವಾ ಸೋಂಕುಪೀಡಿತರೊಂದಿಗೆ ಸಂಪರ್ಕ ಹೊಂದಿದವರಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಆದರೆ ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದೆ ಇಲ್ಲಿನ ಬಟ್ಟೆ ವ್ಯಾಪಾರಿಗಳು ಕೇವಲ ಲಾಭದ ದೃಷ್ಟಿಯಿಂದ ವ್ಯಾಪಾರ ಮಾಡುತ್ತಿರುವುದು ಕಳವಳಕಾರಿ ವಿಷಯವಾಗಿದೆ. ಬಟ್ಟೆ ಅಂಗಡಿ ಬಂದ್ ಗೆ ಆಗ್ರಹ: ನಗರದಲ್ಲಿ ಬಟ್ಟೆ ಅಂಗಡಿಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಮಾಸ್ಕ್ ಇಲ್ಲದೆ ಅಂಗಡಿಗಳಲ್ಲಿ ನೂರಾರು ಜನರು ಸೇರುತ್ತಿದ್ದು ಮುಂದೆ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಕಿರಾಣಿ ಮತ್ತು ಅಗತ್ಯ ವಸ್ತುಗಳ ಅಂಗಡಿಗಳ ಹೊರತು ಬಟ್ಟೆ ಅಂಗಡಿ ಸೇರಿ ಇತರೆ ಅಂಗಡಿ ಬಂದ್ ಮಾಡಿಸುವಂತೆ ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿವೆ.
Related Articles
ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ನಿರ್ಲಕ್ಷ್ಯ ಮಾಡಿ ಜನದಟ್ಟಣೆಯಿಂದ ಬಟ್ಟೆ ಅಂಗಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದ ನಗರದ ಸುಮಾರು ಹತ್ತು ಬಟ್ಟೆ ಅಂಗಡಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಈ ಅಂಗಡಿಗಳ ಮಾಲಿಕರಿಂದ 40 ಸಾವಿರ ರೂ.ದಂಡ ಪಡೆದುಕೊಂಡಿದ್ದಾರೆ. ಈತನ್ಮಧ್ಯೆ ಬಟ್ಟೆ ಅಂಗಡಿಗಳನ್ನು ಬಂದ್ ಮಾಡುವಂತೆ ವಿವಿಧ ಸಂಘಟನೆಯ ಮುಖಂಡರು ಒತ್ತಾಯಿಸಿರುವುದು ಹೌದು ಎಂದು ಪೌರಾಯುಕ್ತ ಗಂಗಾಧರ ಅವರು ಉದಯವಾಣಿ ತಿಳಿಸಿದ್ದಾರೆ.
Advertisement