ನವದೆಹಲಿ: ಚೀನಾದ ಅತೀ ದೊಡ್ಡ ವಾಣಿಜ್ಯ ನಗರವಾದ ಶಾಂಘೈನಲ್ಲಿ 13,000ಕ್ಕೂ ಅಧಿಕ ಕೋವಿಡ್ ನ ನೂತನ ರೂಪಾಂತರಿ ಸೋಂಕು ಪ್ರಕರಣ ಹೆಚ್ಚಳವಾದ ಪರಿಣಾಮ ಕೋವಿಡ್ ಲಾಕ್ ಡೌನ್ ಅನ್ನು ವಿಸ್ತರಿಸಲು ನಿರ್ಧರಿಸಿರುವುದಾಗಿ ಮಂಗಳವಾರ (ಏಪ್ರಿಲ್ 05) ತಿಳಿಸಿದೆ.
ಇದನ್ನೂ ಓದಿ:ವಿವಾದ ಸೃಷ್ಟಿಸಿದ ಕೆಟಿಆರ್ ಟ್ವೀಟ್: ಬಿಜೆಪಿ ವಿರುದ್ದ ಡಿ.ಕೆ.ಶಿವಕುಮಾರ್ ವಾಗ್ದಾಳಿ
ಚೀನಾದ ಶಾಂಘೈನ ಜಿಲ್ಲೆಗಳಲ್ಲಿ ಎರಡು ಹಂತದ ಕೋವಿಡ್ ಲಾಕ್ ಡೌನ್ ಮಂಗಳವಾರ ಮುಕ್ತಾಯವಾಗಬೇಕಿತ್ತು. ಆದರೆ ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ ಮುಂದಿನ ಆದೇಶದವರೆಗೆ ಲಾಕ್ ಡೌನ್ ಮುಂದುವರಿಯಲಿದ್ದು, ಕೋವಿಡ್ ನ ನಾಲ್ಕನೇ ಅಲೆಯ ಭೀತಿ ಎದುರಾಗಿದೆ ಎಂದು ಹೇಳಿದೆ.
ಮಂಗಳವಾರದಿಂದ ನಗರದಲ್ಲಿ ಸಾರಿಗೆ ವ್ಯವಸ್ಥೆ ಸೇರಿದಂತೆ ಉಪಮಾರ್ಗಗಳ ಸಂಚಾರವನ್ನೂ ನಿರ್ಬಂಧಿಸಿರುವುದಾಗಿ ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ಹೆಚ್ಚಳದಿಂದಾಗಿ ಕಳೆದ ವಾರ ಶಾಂಘೈ ನಗರದಲ್ಲಿ ಲಾಕ್ ಡೌನ್ ಹೇರಿದ ಪರಿಣಾಮ ಸುಮಾರು 26 ಲಕ್ಷ ಮಂದಿ ಆಹಾರಕ್ಕಾಗಿ ಪರದಾಡುವಂತಾಗಿತ್ತು. ಕಠಿಣ ನಿರ್ಬಂಧದಿಂದಾಗಿ ಜನರು ಮನೆಯಿಂದ ಹೊರ ಬರಲಾರದೆ ತೊಂದರೆ ಅನುಭವಿಸುವಂತಾಗಿತ್ತು.
ಏಪ್ರಿಲ್ 4ರಂದು ಶಾಂಘೈನಗರದಲ್ಲಿ 13,086 ಕೋವಿಡ್ ನ ನೂತನ ರೂಪಾಂತರಿ ಸೋಂಕು ಪತ್ತೆಯಾಗಿತ್ತು. ಏಪ್ರಿಲ್ 3ರಂದು 8,581 ಪ್ರಕರಣ ವರದಿಯಾಗಿತ್ತು. ಒಮಿಕ್ರಾನ್ ಸೋಂಕು ಪರೀಕ್ಷಿಸಲು ಈಗಾಗಲೇ ಶಾಂಘೈಗೆ ಸುಮಾರು 38 ಸಾವಿರ ಮಂದಿ ಸಿಬಂದಿಯನ್ನು ಕಳುಹಿಸಲಾಗಿದೆ ಎಂದು ಚೀನಾ ತಿಳಿಸಿದೆ.