Advertisement

ಆಸೀಸ್‌ ವಿರುದ್ಧ ಫೈನಲ್‌ ಟೆಸ್ಟ್‌ : ಇಶಾಂತ್‌ ಬದಲು ಉಮೇಶ್‌ ಯಾದವ್‌

06:08 AM Jan 02, 2019 | udayavani editorial |

ಸಿಡ್ನಿ : ಆತಿಥೇಯ ಆಸ್ಟ್ರೇಲಿಯ ವಿರುದ್ದದ ಇದೇ ಗುರುವಾರದಿಂದ ಆರಂಭವಾಗುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್‌ ಕ್ರಿಕೆಟ್‌ ಪಂದ್ಯ ಆಡುವ ಹದಿಮೂರು ಸದಸ್ಯರ ಭಾರತೀಯ ತಂಡವನ್ನು ಇಂದು ಬುಧವಾರ ಪ್ರಕಟಿಸಲಾಗಿದೆ. 

Advertisement

ತಂಡದಲ್ಲಿ  ವೇಗದ ಎಸೆಗಾರ ಇಶಾಂತ್‌ ಶರ್ಮಾ ಅವರ ಬದಲು ಉಮೇಶ್‌ ಯಾದವ್‌ ಅವರನ್ನು ಸೇರಿಸಿಕೊಳ್ಳಲಾಗಿದೆ.

ಉಮೇಶ್‌ ಯಾದವ್‌ ಅವರನ್ನು ಮೆಲ್ಬೋರ್ನ್ ಟೆಸ್ಟ್‌ನಿಂದ ಕೈಬಿಲಾಗಿತ್ತು. ಇದೀಗ ನಾಲ್ಕನೇ ಟೆಸ್ಟಿಗೆ ಇಶಾಂತ್‌ ಶರ್ಮಾ ಅವರ ಸ್ಥಾನಕ್ಕೆ ಉಮೇಶ್‌ ಯಾದವ್‌ ಸೇರಿಸಿಕೊಳ್ಳಲಾಗಿರುವುದನ್ನು ಬಿಟ್ಟರೆ, 3ನೇ ಐತಿಹಾಸಿಕ ಬಾಕ್ಸಿಂಗ್‌ ಡೇ ಟೆಸ್ಟ್‌ ಗೆದ್ದ  ಭಾರತ ತಂಡದಲ್ಲಿ ಬೇರೆ ಯಾವುದೇ ಬದಲಾವಣೆ ಮಾಡಲಾಗಿಲ್ಲ. 

ಬಾಕ್ಸಿಂಗ್‌ ಡೇ ಟೆಸ್ಟಿನಿಂದ ಹೊರಗಿಡಲಾಗಿದ್ದ ಆರಂಭಕಾರರದ ಕೆ ಎಲ್‌ ರಾಹುಲ್‌ ಮತ್ತು ಮುರಳಿ ವಿಜಯ್‌ ಅವರು ನಾಲ್ಕನೇ ಟೆಸ್ಟಿನಿಂದಲೂ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ. 

ಸ್ಪಿನ್‌ ಮೋಡಿಗಾರ ರವಿಚಂದ್ರನ್‌ ಅಶ್ವಿ‌ನ್‌ ಅವರು ನಾಲ್ಕನೇ ಟೆಸ್ಟಿನಲ್ಲಿ ಆಡಲು ಪೂರ್ಣವಾಗಿ ಚೇತರಿಸಿಕೊಂಡಿದ್ದಾರೆಯೇ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 

Advertisement

ನಾಲ್ಕು ಪಂದ್ಯಗಳ ಈ ಟೆಸ್ಟ್‌ ಸರಣಿಯಲ್ಲಿ ಭಾರತ ಈಗಾಗಲೇ 2-1 ಅಂತರದಿಂದ ಮುಂದಿದೆ. ನಾಲ್ಕನೇ ಟೆಸ್ಟ್‌ ಪಂದ್ಯವನ್ನು ಅದು ಡ್ರಾ ಮಾಡಿಕೊಂಡರೂ ಸರಣಿ ಗೆದ್ದಂತಾಗುತ್ತದೆ. ಆದರೆ ತಮ್ಮ ತಂಡ ಕೊನೇ ಟೆಸ್ಟ್‌  ಪಂದ್ಯವನ್ನು  ಗೆದ್ದು ಹೊಸ ಇತಿಹಾಸ ನಿರ್ಮಿಸುವ ಸಂಕಲ್ಪಕ್ಕೆ ಕಟಿಬದ್ಧವಾಗಿದೆ ಎಂದು ಭಾರತೀಯ ತಂಡದ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ.

ಭಾರತೀಯ ತಂಡ ಹೀಗಿದೆ : ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾಣೆ (ಉಪ ನಾಯಕ), ಕೆ ಎಲ್‌ ರಾಹುಲ್‌, ಮಾಯಾಂಕ್‌ ಅಗರ್‌ವಾಲ್‌, ಚೇತೇಶ್ವರ ಪೂಜಾರ, ಹನುಮ ವಿಹಾರಿ, ರಿಷಬ್‌ ಪಂತ್‌, ರವೀಂದ್ರ ಜಡೇಜ, ಕೆ ಯಾದವ್‌, ಆರ್‌ ಅಶ್ವಿ‌ನ್‌, ಎಂ. ಶಮಿ, ಜಸ್‌ಪ್ರೀತ್‌ ಬುಮ್ರಾ, ಉಮೇಶ್‌ ಯಾದವ್‌.

Advertisement

Udayavani is now on Telegram. Click here to join our channel and stay updated with the latest news.

Next