ಬೆಂಗಳೂರು: ಚಂದ್ರಯಾನ 2 ಅನ್ವಯ ಅಂತರಿಕ್ಷ ನೌಕೆಯನ್ನು ಮುಂದಿನ ಕಕ್ಷೆಗೇರಿಸುವ ಕಾರ್ಯ ಯಶಸ್ವಿಯಾಗಿ ನಡೆದಿದೆ. 4ನೇ ಹಂತದ ಕಕ್ಷೆಗೇರಿಸುವ ಕಾರ್ಯ ಇದಾಗಿದೆ.
Advertisement
ಶುಕ್ರವಾರ ಮಧ್ಯಾಹ್ನ 3.27 ನಿಮಿಷಕ್ಕೆ ಕಕ್ಷೆಗೇರಿಸುವ ಕಾರ್ಯ ಯಶಸ್ವಿಯಾಗಿದೆ ಎಂದು ಇಸ್ರೋ ಹೇಳಿಕೊಂಡಿದೆ.
ಜತೆಗೆ ನೌಕೆಯ ಹಾದಿಗೆ ಕಣ್ಗಾವಲು ಇಡಲಾಗಿದ್ದು, ಪರಿಶೀಲಿಸಲಾಗುತ್ತಿದೆ ಎಂದೂ ಅದು ಹೇಳಿದೆ. ಈ ಕುರಿತ ಫೋಟೋ, ಮಾಹಿತಿಯನ್ನು ಇಸ್ರೋ ಟ್ವೀಟ್ ಮಾಡಿದೆ.