Advertisement
ಇತ್ತೀಚಿನ ದಿನಗಳಲ್ಲಿ ಭಾರತೀಯ ಯೋಗ ವಿಶ್ವದ ಗಮನ ಸೆಳೆಯುತ್ತಿದೆ. ಜಗತ್ತಿನಾದ್ಯಂತ ಕೋಟ್ಯಾಂತರ ಮಂದಿ ನಿರಂತರ ಅಭ್ಯಾಸದಲ್ಲಿ ತೊಡಗಿ ಆರೋಗ್ಯವಂತರಾಗುತ್ತಿದ್ದಾರೆ. ಕರ್ನಾಟಕದಲ್ಲಿ ಯೋಗಶಿಕ್ಷಣವನ್ನು ಪಸರಿಸಲು ತುಮಕೂರು ಮೂಲದ ಯೋಗ ಶಿಕ್ಷಣ ಪತಂಜಲಿ ಯೋಗ ಶಿಕ್ಷಣ ಸಮಿತಿ ದೊಡ್ಡ ಮಟ್ಟದ ಕೆಲಸ ಮಾಡುತ್ತಿದೆ.
Related Articles
Advertisement
ಪ್ರಸ್ತುತ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿರುವ ಸೌಪರ್ಣಿಕಾ ವಲಯದ ಸಂಚಾಲಕರಾಗಿ ಮೂರು ಜಿಲ್ಲೆಗಳಲ್ಲಿ ನಡೆಯುತ್ತಿರುವ 156 ಶಿಬಿರಗಳ ಮೇಲುಸ್ತುವಾರಿಯನ್ನು ಹೊತ್ತುಕೊಂಡಿದ್ದಾರೆ.
ಇಡೀ ಕುಟುಂಬ ಯೋಗಕ್ಕೆ ಮೀಸಲು: ಭಕ್ತಮಾರ್ಕಂಡಯ್ಯ ಈಗ ಅತಿ ಇಷ್ಟ ಶಿಶಾìಸನ ಮತ್ತು ಕಷ್ಟವಾದ ಮಯೂರಾಸನ ಸೇರಿದಂತೆ ಸುಮಾರು 84 ಆಸನಗಳನ್ನು ಲೀಲಾಜಾಲವಾಗಿ ಮಾಡುತ್ತಿದ್ದಾರೆ. ತಾವಷ್ಟೇ ಯೋಗ ಮಾಡಿದರೆ ಸಾಲದು ಎಂಬುದನ್ನು ಅರಿತು ಗೃಹಿಣಿಯಾಗಿರುವ ಪತ್ನಿ ಭಾರತಿಗೂ ಯೋಗ ಕಲಿಸಿದ್ದಾರೆ. ಮಹಿಳಾ ವಲಯಕ್ಕೆ ಭಾರತಿ ಯೋಗ ಶಿಕ್ಷಕರಾಗಿದ್ದಾರೆ. ಪಿಯುಸಿ ಹಂತದಲ್ಲಿ ವ್ಯಾಸಾಂಗ ಮಾಡುತ್ತಿರುವ ಪುತ್ರಿ ಮಧುಶ್ರೀ ಯೋಗ ಕಲಿತು ಯುವ ಯೋಗ ಶಿಬಿರದ ಶಿಕ್ಷಕರಾಗಿದ್ದಾರೆ. ಹತ್ತನೇ ತರಗತಿಯ ದರ್ಶನ್‌ಬಾಬು ಮಕ್ಕಳ ಶಿಬಿರದ ಯೋಗ ಶಿಕ್ಷಕರಾಗಿ ಹೊರ ಹೊಮ್ಮಿದ್ದಾರೆ.
ಮಧುಮೇಹಿಗಳಿಗೆ ಯೋಗಾಭ್ಯಾಸ ಶಿಬಿರ: ಕೇವಲ ಯೋಗಭ್ಯಾಸ ಧ್ಯಾನಕ್ಕೆ ಮಾತ್ರವೇ ಯೋಗ ಕಲಿಕೆಯನ್ನು ಮೀಸಲಿಡದೆ ಭಕ್ತಮಾರ್ಕಂಡಯ್ಯ ತಮ್ಮ ಸಮಿತಿಯ ನೇತೃತ್ವದಲ್ಲಿ ಇದುವರೆವಿಗೂ ಹತ್ತು ಮಧುಮೇಹಿಗಳ ಯೋಗಾಭ್ಯಾಸ ಶಿಬಿರ ನಡೆಸಿದ್ದಾರೆ. ಈ ಶಿಬಿರದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳು 21 ದಿನಗಳ ಶಿಬಿರ ಮುಕ್ತಾಯಗೊಳ್ಳುವುದರೊಳಗಾಗಿ ದೇಹದ ಸಕ್ಕರೆ ಪ್ರಮಾಣವನ್ನು ಸಾಮಾನ್ಯ ಮಟ್ಟಕ್ಕೆ ತಂದಿದ್ದನ್ನು ವೈದ್ಯಕೀಯ ದಾಖಲೆಗಳ ಮೂಲಕ ದೃಢಪಡಿಸಿದ್ದಾರೆ.ಈ ಮಧುಮೇಹ ಶಿಬಿರದಲ್ಲಿ 15 ನಿಮಿಷ ಕ್ರಿಯಾತ್ಮಕ ಚಟುವಟಿಕೆ, 16 ಆಸನಗಳನ್ನು ಶಿಬಿರಾರ್ಥಿಗಳು ಮಾಡಬೇಕಾಗುತ್ತದೆ.
ಪ್ರತಿಯೊಬ್ಬರಿಗೂ ಆರೋಗ್ಯ ವಂತ ದೇಹ ಮತ್ತು ಸಂಸ್ಕಾರಯುತ ಜೀವನ ನಡೆಸುವಂತೆ ಪ್ರೇರೇಪಿಸುವುದೇ ಯೋಗದ ಮುಖ್ಯ ಉದ್ದೇಶ ಎಂದು ವಿವರಿಸುವ ಭಕ್ತಮಾರ್ಕಂಡಯ್ಯ, ಸಮಾಜದಲ್ಲಿ ಯುವ ಪೀಳಿಗೆಯಲ್ಲಿ ಸಂಸ್ಕಾರದ ಕೊರತೆಯಾಗುತ್ತಿರುವ ಕುರಿತು ವಿಷಾದಿಸುತ್ತಾರೆ. ಹೆಚ್ಚುತ್ತಿರುವ ಕೌಟುಂಬಿಕ ಕಲಹಗಳನ್ನು ಕಡಿಮೆ ಮಾಡಿ ಪ್ರತಿ ಮನೆಯಲ್ಲಿಯೂ ಶಾಂತಿ ನೆಮ್ಮದಿ ಮೂಡಿಸುವ ಗುರಿಯನ್ನು ಶಿಬಿರಗಳ ಉದ್ದೇಶವಾಗಿಸಿಕೊಂಡಿದ್ದಾರೆ.
ಸಮಾಜದ ಪರಿವರ್ತನೆಗಾಗಿ ಯೋಗವನ್ನು ಇಡೀ ಕುಟುಂಬದ ಮೂಲಕ ಶ್ರಮಿಸುತ್ತಿರುವ ಭಕ್ತಮಾರ್ಕಂಡಯ್ಯ ಕುಟುಂಬ ಯೋಗ ದಿನಾಚರಣೆಯ ಸಂದರ್ಭದಲ್ಲಿ ಪ್ರಮುಖ ಯೋಗ ಕುಟುಂಬವಾಗಿ ಗಮನ ಸೆಳೆದಿದ್ದಾರೆ.
– ಕೆ.ಎಸ್.ಗಣೇಶ್