ಬಳ್ಳಾರಿ: ಕೊಳಚೆ ನೀರಲ್ಲಿ ಬಿದ್ದು ಮಗು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಬಳ್ಳಾರಿ ಜಿಲ್ಲೆಯ ಕೆ ವೀರಾಪುರ ಗ್ರಾಮದಲ್ಲಿ ನಡೆದಿದೆ.
ವೀರಾಪುರ ಗ್ರಾಮದ ಬಸವರಾಜ್ ಹಾಗೂ ಜ್ಯೋತಿ ಅವರ ಸೋಮೇಶ್(4) ಸಾವನ್ನಪ್ಪಿದ ಮಗು.
ಇಂದು ಬೆಳಗ್ಗೆ ಮನೆಯ ಎದುರು ಆಟ ಆಡುತ್ತಾ ಕೊಳಚೆ ನೀರಲ್ಲಿ ಬಿದ್ದಿದೆ. ಮನೆಯ ಮುಂಭಾಗದಲ್ಲಿ ಮಗು ಕಾಣದ ಹಿನ್ನೆಲೆ, ಹುಡುಕಾಟ ನಡೆಸಿದ್ದ ತಾಯಿ. ಕೊನೆಯಲ್ಲಿ ಕೊಳೆಚೆ ನೀರಿನಲ್ಲಿ ಮಗು ಶವವಾಗಿ ಪತ್ತೆಯಾಗಿದೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿ 150 ರಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು, ಓರ್ವ ಗಂಭೀರ
ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.