Advertisement

ಮುಂಬಯಿಯ ಭಾಯಂದರ್‌ನಲ್ಲಿ ನಾಲ್ಕರ ಬಾಲೆಯ ಗ್ಯಾಂಗ್‌ ರೇಪ್‌, ಮರ್ಡರ್‌ 

03:17 PM Jan 15, 2017 | |

ಮುಂಬಯಿ: ನಗರದ ಹೊರವಲಯದ ಭಾಯಂದರ್‌ಅಮಾನುಷ ಘಟನೆಯೊಂದರಲ್ಲಿ ಮೂವರು ಕಾಮಾಂಧರು ನಾಲ್ಕರ ಹರೆಯದ ಬಾಲಕಿಯನ್ನು ಚಾಕಲೇಟ್‌ ಆಮಿಷ ತೋರಿಸಿ ಕರೆದೊಯ್ದು ಬರ್ಬರವಾಗಿ ಸಾಮೂಹಿಕ ಅತ್ಯಾಚಾರಗೈದು ಬರ್ಬರವಾಗಿ ಹತ್ಯೆಗೈದಿದ್ದಾರೆ. ಈಗಾಗಲೇ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಅಜಾದ್‌ನಗರ ಮನೆಯಿಂದ ಬಾಲಕಿ ನಾಪತ್ತೆಯಾಗಿದ್ದು, ಈ ಬಗ್ಗೆ ಪೊಲೀಸರಿಗೆ ಪೋಷಕರು ದೂರು ನೀಡಿದ್ದರು. ಆ ಬಳಿಕ ಮನೆಯ ಅನತಿ ದೂರದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಶವ ನೂಡಿದ ವ್ಯಕ್ತಿಯೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಿದಾಗ ಅತ್ಯಾಚಾರ ನಡೆದಿರುವುದು ಧೃಢಪಟ್ಟಿದ್ದು, ಬಲವಾಗಿ ತಲೆಗೆ ಹೊಡೆದು ಹತ್ಯೆಗೈದಿರುವುದು ಕಂಡು ಬಂದಿದೆ. 

ಆರೋಪಿಗಳ ಪೈಕಿ ಒಬ್ಟಾತ ಬಾಲಕಿಯ ಮನೆಯವರಿಗೆ ಪರಿಚಯದವನೇ ಆಗಿದ್ದ ಎಂದು ಹೇಳಲಾಗಿದೆ. ಮೂವರು ಕೂಲಿ ಕಾರ್ಮಿಕರು ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next