Advertisement

ವಂಚಕ ನೀರವ್‌ ಮೋದಿಗೆ ಸೇರಿದ 4 ಸ್ವಿಸ್‌ ಖಾತೆ ಮುಟ್ಟುಗೋಲು

10:23 AM Jun 28, 2019 | Team Udayavani |

ಹೊಸದಿಲ್ಲಿ: ಪಂಜಾಬ್‌ ನ್ಯಾಶನಲ್‌ ಬ್ಯಾಂಕಿಗೆ 13,500 ಕೋಟಿ ರೂ. ವಂಚನೆಗೈದು, ವಿದೇಶಕ್ಕೆ ಪಲಾಯನ ಗೈದಿರುವ ಘೋಷಿತ ಆರ್ಥಿಕ ಅಪರಾಧಿ ನೀರವ್‌ ಮೋದಿಗೆ ಸೇರಿರುವ ನಾಲ್ಕು ಸ್ವಿಸ್‌ ಬ್ಯಾಂಕ್‌ ಖಾತೆಗಳನ್ನು ಮುಟ್ಟುಗೋಲು ಹಾಕಲಾಗಿದೆ.

Advertisement

ಜಾರಿ ನಿರ್ದೇಶನಾಲಯದ ಮನವಿಯ ಮೇರೆಗೆ ನೀರವ್‌ಗೆ ಸೇರಿದ 2 ಮತ್ತು ಸಹೋದರಿ ಪೂರ್ವಿಗೆ ಸೇರಿದ 2 ಖಾತೆಗಳನ್ನು ಸ್ವಿಟ್‌ಝರ್‌ಲ್ಯಾಂಡ್‌ ಸರಕಾರ ಜಪ್ತಿ ಮಾಡಿದೆ ಎಂದು ತಿಳಿದು ಬಂದಿದೆ.

ಮುಟ್ಟುಗೋಲು ಹಾಕಲಾಗಿರುವ 4 ಖಾತೆಗಳ ಮೌಲ್ಯ 283.16 ಕೋಟಿ ರೂಪಾಯಿ ಎಂದು ತಿಳಿದು ಬಂದಿದೆ.

ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿಯಾಗಿರುವ ನೀರವ್‌ ಪ್ರಕೃತ ಲಂಡನ್‌ನಿಂದ ಭಾರತಕ್ಕೆ ಗಡೀಪಾರಾಗುವ ಹಂತದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next