Advertisement

4 ಅಂತಸ್ತಿನ ಕಟ್ಟಡ ಕುಸಿತ : 2 ಸಾವು, ಹಲವರಿಗೆ ಗಾಯ

10:10 AM Aug 24, 2019 | Mithun PG |

ಮುಂಬೈ: 4 ಅಂತಸ್ತಿನ ಕಟ್ಟಡ ಕುಸಿತಗೊಂಡು ಇಬ್ಬರು ಸಾವಿಗೀಡಾಗಿ ಹಲವರು ಗಾಯಗೊಂಡಿರುವ ಘಟನೆ ಮುಬಯಿ ಸಮೀಪದ ಭೀವಂಡಿ ನಗರದ ಶಾಂತಿನಗರದಲ್ಲಿ ನಡೆದಿದೆ.

Advertisement

ಸ್ಥಳಕ್ಕಾಗಮಿಸಿದ ಎನ್ ಡಿ ಆರ್ ಎಫ್ ಪಡೆ ತ್ವರಿತ ರಕ್ಷಣಾ ಕಾರ್ಯಚರಣೆ ನಡೆಸಿ , ನಾಲ್ವರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ರವಾನಿಸಿದೆ. ಕಟ್ಟಡದ ಅವಶೇಷಗಳಡಿ ಇನ್ನಷ್ಟು ಮಂದಿ ಸಿಲುಕಿರುವ ಸಾಧ್ಯತೆ ಇದ್ದು ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.

ಸ್ಥಳೀಯ ನಗರ ಪಾಲಿಕೆ ಆಯುಕ್ತ ಅಶೋಕ್ ರಾಂಖಾಂಬ್  ಸ್ಥಳಕ್ಕೆ ಭೇಟಿ ನೀಡಿದ್ದು, ತುರ್ತು ರಕ್ಷಣಾ ಕಾರ್ಯಕ್ಕೆ  ಕ್ರಮ ಕೈಗೊಂಡಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next