Advertisement

ಲಾರಿ, ಮಿನಿ ಬಸ್ ಡಿಕ್ಕಿ; ನಾಲ್ವರು ಸ್ಪೇನ್ ಪ್ರಜೆಗಳು ಸೇರಿ ಐವರು ಬಲಿ

04:57 PM Aug 05, 2017 | Sharanya Alva |

ಆಂಧ್ರಪ್ರದೇಶ: ಮಿನಿ ಬಸ್ ವೊಂದು ಟ್ಯಾಂಕರ್ ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಪೇನ್  ನ ಪ್ರವಾಸಿಗರು ಹಾಗೂ ಮಹಿಳೆ ಸೇರಿದಂತೆ ಐವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

Advertisement

ಸ್ಥಳೀಯ ಮಿನಿ ಬಸ್ ಚಾಲಕ ಅಪಘಾತದಲ್ಲಿ ಸಾವನ್ನಪ್ಪಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಸ್ಪೇನ್ ನ 11 ಮಂದಿ ಪ್ರವಾಸಿಗರು ಪುಟ್ಟಪರ್ತಿಯಿಂದ ಪಾಂಡಿಚೇರಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ವರದಿ ಹೇಳಿದೆ.

ಘಟನೆಯಲ್ಲಿ ಆರು ಮಂದಿ ಸ್ಪೇನ್ ಪ್ರಜೆಗಳು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ವಿವರಿಸಿದೆ. ಉಳಿದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಪ್ಯಾನಿಶ್ ಪ್ರಜೆಗಳು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಆಯೋಜಿಸಿದ್ದ ಅಭಿವೃದ್ಧಿ ಚಟುವಟಿಕೆ ವೀಕ್ಷಣೆಗಾಗಿ ಸ್ಪೇನ್ ನಿಂದ ಅನಂತಪುರಂ ಜಿಲ್ಲೆಗೆ ಆಗಮಿಸಿದ್ದರು. ಸ್ಪ್ಯಾನಿಶ್ ಪ್ರಜೆಗಳಾದ ವಿನ್ಸೆಂಟ್ ಪ್ರೆಝ್, ಜೋಸೆಫಾ ಮೋರಾನ್, ಫ್ರಾನ್ಸಿಸ್ಕೋ ಪೆಡ್ರೋಸಾ ಮತ್ತು ನಿಇವ್ಸ್ ಲೋಪಾಝ್ ಸಾವನ್ನಪ್ಪಿದಿದ್ದಾರೆ. ಸ್ಥಳೀಯ ಮಿನಿ ಬಸ್ ಚಾಲಕನ ಗುರುತು ಇನ್ನಷ್ಟೇ ಪತ್ತೆ ಹಚ್ಚಬೇಕಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next