Advertisement

ಸುಪ್ರೀಂನಲ್ಲೇ ಸರಿಯಿಲ್ಲ:CJI ವಿರುದ್ಧ ಸಿಡಿದೆದ್ದ ಜಡ್ಜ್ ಗಳು!

12:44 PM Jan 12, 2018 | Team Udayavani |

ಹೊಸದಿಲ್ಲಿ: ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯ ಕುರಿತು ಅನುಮಾನ ವ್ಯಕ್ತವಾಗುತ್ತಿರುವ ಹೊತ್ತಲ್ಲೇ, ಇತಿಹಾಸದಲ್ಲೇ ಮೊದಲ ಬಾರಿ ಎಂಬಂತೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಗುರುವಾರ ಸುದ್ದಿಗೋಷ್ಠಿ ನಡೆಸಿ  ಮುಖ್ಯ ನ್ಯಾಯಮೂರ್ತಿ ವಿರುದ್ಧ ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ.

Advertisement

ನ್ಯಾಯಮೂರ್ತಿಗಳಾದ ಜಸ್ಟಿಸ್‌ ಮದನ್‌ ಲೋಕುರ್‌, ಜಸ್ಟಿಸ್‌ ಚಲ್ಮೇಶ್ವರ್‌ , ಜಸ್ಟಿಸ್‌ ಕುರಿಯನ್‌ ಜೋಸೆಫ್ ಮತ್ತು ರಂಜನ್‌ ಗೊಗೋಯ್‌ ಸುದ್ದಿಗೋಷ್ಠಿ ನಡೆಸಿ ಕೋರ್ಟ್‌ ವಿದ್ಯಮಾನಗಳ ಕುರಿತು ತಮಗಿರುವ ಅಸಮಧಾನವನ್ನು ಹೊರಹಾಕಿದರು. 

‘ಕೆಲವು ಬಾರಿ ಸುಪ್ರೀಂ ಕೋರ್ಟ್‌ನಲ್ಲಿ ಬಯಸದ ಘಟನೆಗಳು ನಡೆಯುತ್ತಿವೆ. ಕೋರ್ಟ್‌ ಬೆಳವಣಿಗೆಗಳು ಸರಿಯಿಲ್ಲ. ಅಂತಹ ಘಟನೆಗಳ ಬಗ್ಗೆ ಸಿಜೆಐ ಅವರಿಗೆ ಪತ್ರ ಬರೆದು ತಿಳಿಸಿದ್ದೇವೆ. ಆದರೆ  ಫ‌ಲ ಸಿಗಲಿಲ್ಲ ಹೀಗಾಗಿ ಅನಿವಾರ್ಯವಾಗಿ ನಾವು ದೇಶದ ಜನರ ಮುಂದೆ ಬಂದಿದ್ದೇವೆ’ ಎಂದಿದ್ದಾರೆ.

ನ್ಯಾಯಾಂಗ ವ್ಯವಸ್ಥೆ ಪಾರದರ್ಶಕವಾಗಿರದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ. ಪ್ರಜಾಪ್ರಭುತ್ವ,  ಸುಪ್ರೀಂ ಕೋರ್ಟ್‌ನ ಘಟನೆ ಎತ್ತಿಹಿಡಿಯುವ ಯತ್ನ ಮಾಡುತ್ತಿದ್ದೇವೆ ಎಂದರು.

ಅಟಾರ್ನಿ ಜನರಲ್‌ ಭೇಟಿಯಾದ ಸಿಜೆಐ  

Advertisement

ನ್ಯಾಯಮೂರ್ತಿಗಳಸುದ್ದಿಗೋಷ್ಠಿ ಬೆನ್ನಲ್ಲೇ ಸಿಜೆಐ ಜಸ್ಟಿಸ್‌ ದೀಪಕ್‌ ಮಿಶ್ರಾ ಅವರು ಅಟಾರ್ನಿ ಜನರಲ್‌  ಕೆ.ಕೆ.ವೇಣುಗೋಪಾಲ್‌ ಅವರನ್ನು ತುರ್ತಾಗಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಕಾನೂನು ಸಚಿವರಿಗೆ ಪ್ರಧಾನಿ ಕರೆ 

ನ್ಯಾಯಮೂರ್ತಿಗಳ ಸುದ್ದಿಗೋಷ್ಠಿ ಗಮನಕ್ಕೆ ಬರುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಅವರಿಗೆ ಕರೆ ಮಾಡಿ  ವಿವರ ಪಡೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next