Advertisement

ವಾಹನಕ್ಕೆ ಟ್ರಕ್‌ ಢಿಕ್ಕಿ : ಒಂದೇ ಕುಟುಂಬದ ನಾಲ್ವರ ದಾರುಣ ಸಾವು

04:18 PM Apr 29, 2017 | Team Udayavani |

ಬರ್‌ದ್ವಾನ್‌ (ಪಶ್ಚಿಮ ಬಂಗಾಲ): ಅಂದಾಲ್‌ ಸಮೀಪ ಕಜೋರಾ ರಸ್ತೆಯಲ್ಲಿ ಟ್ರಕ್‌ ಒಂದು ವಾಹನಕ್ಕೆ ಹಿಂಬದಿಯಿಂದ ಢಿಕ್ಕಿ ಹೊಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟು ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡರೆಂದು  ಪೊಲೀಸರು ತಿಳಿಸಿದ್ದಾರೆ. 

Advertisement

ಬಂಕುರಾ ಜಿಲ್ಲೆಯ ಘಂತಿಪಹಾಡ್‌ ಎಂಬಲ್ಲಿ ಮದುವೆ ಸಮಾರಂಭ ಮುಗಿಸಿ ದುರ್ಗಾಪುರದ ರಾಣಾ ಪ್ರತಾಪ್‌ ಪ್ರದೇಶಕ್ಕೆ ಮರಳುತ್ತಿದ್ದ ವೇಳೆ ಈ ದುರ್ಘ‌ಟನೆ ಸಂಭವಿಸಿತು. 

ಭಾರೀ ಸರಕು ತುಂಬಿದ ಟ್ರಕ್‌ ಒಂದು ತನ್ನ ಎದುರಲ್ಲಿ ಸಾಗುತ್ತಿದ್ದ ವಾಹನಕ್ಕೆ ಹಿಂದಿನಿಂದ ಢಿಕ್ಕಿ ಹೊಡೆಯಿತು. ಆಗ ವಾಹನವು ತನ್ನ ಎದುರಿಗೆ ಸಾಗುತ್ತಿದ್ದ ಟ್ರೇಲರ್‌ಗೆ ಢಿಕ್ಕಿ ಹೊಡೆಯಿತು. ಇದರಿಂದಾಗಿ ವಾಹನವು ಸಂಪೂರ್ಣ ಅಪ್ಪಚ್ಚಿಯಾಯಿತು. ವಾಹನದೊಳಗೆ ಒಂದೇ ಕುಟುಂಬದ ಐವರು ಇದ್ದು ಅವರಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರು. 

ಮೃತರನ್ನು ಮಿಲಾನ್‌ ಮುಖಜಿ, ಭಕ್ತಿ ಮುಖರ್ಜಿ, ಕೋನಿಕಾ ಮುಖರ್ಜಿ ಮತ್ತು ಸೌಮೇನ್‌ ಮುಖರ್ಜಿ (8ನೇ ತರಗತಿ ವಿದ್ಯಾರ್ಥಿನಿ) ಎಂದು ಗುರುತಿಸಲಾಗಿದೆ. ಗಾಯಾಳು ಜಿಬಾನ್‌ ಮುಖರ್ಜಿ ಅವರನ್ನು ಡಿಎಸ್‌ಪಿ ಆಸ್ಪತ್ರೆಗೆ ಸೇರಿಸಲಾಗಿದೆ. 

ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next