Advertisement

ಸುಪ್ರೀಂ ಕೋರ್ಟಿನ ನಾಲ್ವರು ನೂತನ ನ್ಯಾಯಮೂರ್ತಿಗಳಿಗೆ ಸಿಜೆಐ ಪ್ರಮಾಣ ವಚನ

09:42 AM May 25, 2019 | Sathish malya |

ಹೊಸದಿಲ್ಲಿ : ಸರ್ವೋಚ್ಚ ನ್ಯಾಯಾಲಯದ ವರಿಷ್ಠ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಅವರಿಂದು ಸುಪ್ರೀಂ ಕೋರ್ಟಿನ ನಾಲ್ವರು ಹೊಸ ನ್ಯಾಯಮೂರ್ತಿಗಳಿಗೆ ಪ್ರಮಾಣ ವಚನ ಬೋಧಿಸಿದರು.

Advertisement

ಇದರೊಂದಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಸಂಖೆ 31ಕ್ಕೇರಿತು. ಇದು ಸುಪ್ರೀಂ ಕೋರ್ಟಿಗೆ ಮಂಜೂರಾಗಿರುವ ನ್ಯಾಯಮೂರ್ತಿಗಳ ಪೂರ್ಣ ಪ್ರಮಾಣದ ಸಂಖ್ಯೆಯಾಗಿದೆ.

ಜಸ್ಟಿಸ್‌ಗಳಾದ ಬಿ ಆರ್‌ ಗವಾಯಿ, ಸೂರ್ಯ ಕಾಂತ್‌, ಅನಿರುದ್ಧ ಬೋಸ್‌ ಮತ್ತು ಎ ಎಸ್‌ ಬೋಪಣ್ಣ ಅವರಿಗೆ ಸಿಜೆಐ ಗೊಗೋಯ್‌ ಅವರು ಕೋರ್ಟ್‌ ನಂಬರ್‌ 1ರಲ್ಲಿ ಇತರ ಅನೇಕ ಹಾಲಿ ನ್ಯಾಯಮೂರ್ತಿಗಳ ಸಮ್ಮುಖದಲ್ಲಿ ಪ್ರಮಾಣ ವಚನ ಬೋಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next