Advertisement

ಹುಬ್ಬಳ್ಳಿಯಲ್ಲಿ ಮತ್ತೆ 4 ಕೋವಿಡ್-19 ಪಾಸಿಟಿವ್ ಪ್ರಕರಣ ಪತ್ತೆ

03:33 PM Apr 13, 2020 | keerthan |

ಧಾರವಾಡ: ಹುಬ್ಬಳ್ಳಿಯಲ್ಲಿ ಇಂದು ಹೊಸ ನಾಲ್ಕು ಕೋವಿಡ್ 19 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಸೋಂಕಿತ ಸಂಖ್ಯೆ 194ರ ಸಂಪರ್ಕಕ್ಕೆ ಬಂದಿರುವ ನಾಲ್ಕು ಜನರಿಗೆ ಈ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಧಾರವಾಡ ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ಅವರು ತಿಳಿಸಿದ್ದಾರೆ.

Advertisement

ಸೋಂಕಿತರೆಲ್ಲರೂ  ಹುಬ್ಬಳ್ಳಿಯ ಮುಲ್ಲಾ ಓಣಿಯ ನಿವಾಸಿ ಸೋಂಕಿತ ಸಂಖ್ಯೆ 194 ರ ಅಣ್ಣ ಮತ್ತು ಅಣ್ಣನ ಮಕ್ಕಳಾಗಿದ್ದಾರೆ.

ಸೋಂಕಿತ ಸಂಖ್ಯೆ -233( 05 ವರ್ಷ, ಗಂಡುಮಗು) , ಸೋಂಕಿತ ಸಂಖ್ಯೆ -234 (3.6 ವರ್ಷ, ಗಂಡುಮಗು) , ಸೋಂಕಿತ ಸಂಖ್ಯೆ -235( 07 ವರ್ಷ, ಹೆಣ್ಣುಮಗು) ಹಾಗೂ ವ-236 (37 ವರ್ಷ, ಪುರುಷ ) ಎಂದು ಗುರುತಿಸಲಾಗಿದೆ. ಸೋಂಕಿತರಿಗೆ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈಗಾಗಲೇ ಈ ಪ್ರದೇಶವನ್ನು ಕಂಟೇನ್ ಮೆಂಟ್ ಎಂದು ಘೋಷಿಸಿ ಆಗಮನ, ನಿರ್ಗಮನ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next