Advertisement

ರೇಪ್‌ಗೆ ಪ್ರತಿರೋಧ ತೋರಿದ ಹುಡುಗಿಯ ಕಿವಿಗಳನ್ನೇ ಕತ್ತರಿಸಿದ ಕಾಮಾಂಧರು

12:19 PM Jan 06, 2017 | udayavani editorial |

ಲಕ್ನೋ : ಅತ್ಯಾಚಾರಕ್ಕೆ ಪ್ರತಿರೋಧ ಒಡ್ಡಿದ ಯುವತಿಯ ಕಿವಿಗಳನ್ನು ನಾಲ್ವರು ಕಾಮಾಂಧ ತರುಣರು ಕತ್ತರಿಸಿ ಆಕೆಯನ್ನು ಗಂಭೀರವಾಗಿ ಗಾಯಗೊಳಿಸಿದ ಅತ್ಯಂತ ಅಮಾನುಷ ಘಟನೆ ಉತ್ತರ ಪ್ರದೇಶದ ಭಾಗಪತ್‌ ಜಿಲ್ಲೆಯಲ್ಲಿ ನಡೆದಿದೆ.

Advertisement

ಯುವತಿಯ ಮನೆಗೇ ನುಗ್ಗಿ ಬಂದಿದ್ದ ನಾಲ್ವರು ಕಾಮಾಂಧ ತರುಣರು ಆಕೆಯ ಮೇಲೆ ಅತ್ಯಾಚಾರಕ್ಕೆ ಮುಗಿಬಿದ್ದಾಗ ಆಕೆ ತೀವ್ರ ಪ್ರತಿರೋಧ ಒಡ್ಡಿದಳಲ್ಲದೆ ನೆರೆಕರೆಯವರನ್ನು ಸಹಾಯಕ್ಕಾಗಿ ಬೊಬ್ಬಿಟ್ಟಳು. ಆಗ ಕುಪಿತರಾದ ಕಾಮಾಂಧರು ಹರಿತವಾದ ಆಯುಧದಿಂದ ಆಕೆಯ ಕಿವಿಗಳನ್ನು ಹರಿದು ಹಾಕಿದರು. ಈ ಹೇಯ ಘಟನೆ ಜನವರಿ 4ರ ಬುಧವಾರ ನಡೆದಿದ್ದು ತಡವಾಗಿ ವರದಿಯಾಗಿದೆ.

ಹೊಸ ವರ್ಷದ ಹಿಂದಿನ ರಾತ್ರಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಎಸಗಲಾದ ಘಟನೆಗಳು ದೇಶದ ವಿವಿಧ ನಗರಗಳಿಂದ ವರದಿಯಾದ ಬೆನ್ನಿಗೇ, ಈ ಘಟನೆ ನಡೆದಿರುವುದು ದೇಶಾದ್ಯಂತದ ಮಹಿಳೆಯರಲ್ಲಿ ತೀವ್ರ ತಲ್ಲಣ, ಅಭದ್ರತೆಯ ಭಯ ಸೃಷ್ಟಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next