Advertisement

ಪುಲ್ವಾಮದಲ್ಲಿ ನಾಲ್ವರು ಲಷ್ಕರ್‌ ಉಗ್ರರನ್ನು ಹೊಡೆದುರುಳಿಸಿದ ಸೇನೆ

09:30 AM Apr 02, 2019 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಲಸ್ಸಿಪೋರಾ ಎಂಬಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಸೋಮವಾರದಂದು ನಡೆದ ಗುಂಡಿನ ದಾಳಿಯಲ್ಲಿ ಸೇನೆ ನಾಲ್ವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಸಫ‌ಲವಾಗಿದೆ. ಈ ಉಗ್ರರು ಲಷ್ಕರ್‌ – ಇ -ತಯ್ಬಾ ಸಂಘಟನೆಗೆ ಸೇರಿದವರೆಂದು ತಿಳಿದುಬಂದಿದೆ. ಈ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಮೂವರು ಯೋಧರೂ ಸಹ ಗಾಯಗೊಂಡಿದ್ದಾರೆ.

Advertisement

ಸೋಮವಾರ ನಸುಕಿನ ಜಾವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಈ ಸಂದರ್ಭದಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿರುವ ಕುರಿತು ವರದಿಯಾಗಿದೆ. ಉಗ್ರರು ಅಡಗಿರುವ ಈ ಪ್ರದೇಶವನ್ನು ಭದ್ರತಾ ಪಡೆ ಸುತ್ತುವರೆದಿದ್ದು ಈ ಭಾಗದಲ್ಲಿ ತೀವ್ರ ಶೋಧ ಕಾರ್ಯವನ್ನು ಕೈಗೊಂಡಿದೆ. ಇನ್ನೂ ಮೂವರು ಉಗ್ರರು ಈ ಭಾಗದಲ್ಲಿ ಅಡಗಿರುವ ಶಂಕೆಯನ್ನು ಸೇನಾ ಮೂಲಗಳು ವ್ಯಕ್ತಪಡಿಸಿವೆ.

55 ರಾಷ್ಟ್ರೀಯ ರೈಫ‌ಲ್‌ ದಳ, ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಪಡೆ ಹಾಗೂ ಕೆಂದ್ರೀಯ ಮೀಸಲು ಪೊಲೀಸ್‌ ಪಡೆಗಳು ಜಂಟಿಯಾಗಿ ಈ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಎನ್‌ ಕೌಂಟರ್‌ ನಲ್ಲಿ ಮೃತಪಟ್ಟಿರುವ ಉಗ್ರರ ಗುರುತು ಇನ್ನೂ ಪತ್ತೆಯಾಗಿಲ್ಲ. ಎರಡು ಎ.ಕೆ. ರೈಫ‌ಲ್‌ ಗಳು, ಒಂದು ಎಸ್‌.ಎಲ್‌.ಆರ್‌. ಮತ್ತು ಒಂದು ಪಿಸ್ತೂಲ್‌ ಅನ್ನು ಇದೇ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next