Advertisement
ಎಲ್ ಆ್ಯಂಡ್ ಟಿ ಕಂಪೆನಿಯು ಈ ಕಾಮಗಾರಿ ವಹಿಸಿಕೊಂಡ ಬಳಿಕ ಪಾಣೆಮಂಗಳೂರು ಸೇತುವೆ ಸನಿಹ ಪರಕೇರಿಯ ಸುಮಾರು ಹತ್ತು ಎಕರೆಯಲ್ಲಿ ಸರಕು ಸಾಮಗ್ರಿಗಳ ಸಂಗ್ರಹ ಮಾಡಿತ್ತು. ಈಗ ಅಲ್ಲಿನ ಬಹುತೇಕ ಕಾರ್ಮಿಕರು, ಯಂತ್ರೋಪಕರಣಗಳನ್ನು ತೆರವುಗೊಳಿಸಲಾಗಿದೆ.
ಎಲ್ ಆ್ಯಂಡ್ ಟಿ ಕಂಪೆನಿಗೆ ಈ ರಸ್ತೆ ಕಾಮಗಾರಿ ನಿರ್ವಹಿಸಲು ಎನ್‌ಎಚ್
ಎಐ ಜತೆಗೆ 2017ರಲ್ಲಿ ಒಪ್ಪಂದ ಆಗಿತ್ತು. ಎಂಜಿನಿಯರಿಂಗ್, ಪ್ರೊಕ್ಯೂರ್‌ವೆುಂಟ್ ಮತ್ತು ಕನ್‌ಸ್ಟ್ರಕ್ಷನ್ (ಇಪಿಸಿ) ಮಾದರಿಯಲ್ಲಿ 30 ತಿಂಗಳ ಒಳಗೆ ನಾಲ್ಕು ಲೇನ್ ಕಾಂಕ್ರೀಟ್ ರಸ್ತೆಯನ್ನು ಪೂರ್ಣಗೊಳಿಸಬೇಕಿತ್ತು. ಅದು ವಿವಿಧ ಕಾರಣಗಳಿಂದ ನನೆಗುದಿಗೆ ಬಿದ್ದಿದೆ. ಈಗಾಗಲೇ 20 ತಿಂಗಳು ಮುಕ್ತಾಯ ಆಗಿದ್ದು, ಇನ್ನುಳಿದ ಹತ್ತು ತಿಂಗಳಲ್ಲಿ ಕೆಲಸ ನಿರ್ವಹಿಸುವುದು ಅಸಾಧ್ಯ ಎಂಬ ನೆಲೆಯಲ್ಲಿ ಕಂಪೆನಿಯು ಒಪ್ಪಂದ
ದಿಂದ ನಿರ್ಗಮಿಸಲು ಯೋಜಿಸಿರುವು
ದಾಗಿ ಮಾಹಿತಿ ಲಭ್ಯವಾಗಿದೆ.
ಹೊಂದಾಣಿಕೆ ಕೊರತೆ?
ಯೋಜನೆಗೆ ಜಿಲ್ಲಾಡಳಿತ, ಎನ್‌ಎಚ್‌ಎಐ ಸಹಕಾರ ನೀಡುತ್ತಿಲ್ಲ. ಆರಂಭದಲ್ಲಿದ್ದ ಟೆಂಡರ್‌ನಲ್ಲಿ ಕೆಲವು ಬದಲಾವಣೆ ತಂದಿದ್ದು, ಗುಂಡ್ಯದಲ್ಲಿ ಅರಣ್ಯ ಇಲಾಖೆ ನಿರಾಕ್ಷೇಪಣ ಪತ್ರ ನೀಡಿಲ್ಲ. ಇದರಿಂದ ಸುಮಾರು 145 ಕೋಟಿ ರೂ. ಹೆಚ್ಚುವರಿ ವೆಚ್ಚ ಆಗಲಿದ್ದು, ನಷ್ಟವಾಗುತ್ತದೆ ಎಂಬುದು ಕಂಪೆನಿ ಹಿಂದೆ ಸರಿಯಲು ಕಾರಣ ಎನ್ನಲಾಗಿದೆ. ಅಲ್ಲದೆ, ಕಲ್ಲಡ್ಕದಲ್ಲಿ ಬೈಪಾಸ್ ಅಥವಾ ಮೇಲ್ಸೇತುವೆ ನಿರ್ಮಾಣ ಗೊಂದಲ ಇರುವುದರಿಂದ ಎನ್‌ಎಚ್‌ಎಇ 1.2 ಕಿ.ಮೀ. ರಸ್ತೆಯನ್ನು ಒಪ್ಪಂದದ ಬಳಿಕ ಕಡಿತ ಮಾಡಿದೆ.
ಮಳೆಗಾಲದಲ್ಲಿ ಗುಡ್ಡ ಪ್ರದೇಶದಲ್ಲಿ ರಸ್ತೆ ಅಗಲಗೊಳಿಸುವಾಗ ಕುಸಿದು ತೊಂದರೆಯಾಗಿತ್ತು. ಬಹುತೇಕ ಖಾಸಗಿ ಜಮೀನಾಗಿದ್ದು, ಭೂ ಸ್ವಾಧೀನಕ್ಕೆ ಸಮಸ್ಯೆಗಳು ಎದುರಾಗಿದ್ದವು. ಇನ್ನಷ್ಟು
ಜಮೀನು ಸ್ವಾಧೀನ ಆಗಬೇಕಾಗಿರು
ವುದು ಅಡ್ಡಿಯನ್ನು ಕ್ಲಿಷ್ಟವಾಗಿಸಿದೆ.
ಪೆರಿಯಶಾಂತಿಯಲ್ಲಿ ಸೇತುವೆ ಹೆಚ್ಚು ಅಗಲಗೊಳಿಸುವುದು, ಮೂರು ಸಣ್ಣ ಸೇತುವೆಗಳ ವಿಸ್ತರಣೆ, ನೆಲ್ಯಾಡಿಯಲ್ಲಿ ಅಂಡರ್‌ಪಾಸ್ ನಿರ್ಮಾಣ, ವಾಹನ ದಟ್ಟಣೆಯ ಪ್ರದೇಶಗಳಾದ ನರಿಕೊಂಬು ಪಾಣೆಮಂಗಳೂರು ಕ್ರಾಸ್, ಮೆಲ್ಕಾರ್ ಕ್ರಾಸ್, ಪುತ್ತೂರು ಕ್ರಾಸ್ ಮತ್ತು ಸುಬ್ರಹ್ಮಣ್ಯ ಕ್ರಾಸ್‌ಗಳಲ್ಲಿ ಜಂಕ್ಷನ್ ಪರಿವರ್ತನೆಗೆ ಸಂಸದರು ಬಯಸಿದಂತೆ ಅಂದಾಜು ಪ್ರಸ್ತಾವನೆ ಸಲ್ಲಿಸಿದ್ದರೂ ಸ್ಪಂದನೆ ದೊರೆಯದಿರುವುದು ಕಂಪೆನಿ ಹಿಂದೆ ಸರಿಯುವುದಕ್ಕೆ ಇನ್ನೊಂದು ಕಾರಣ ಎನ್ನಲಾಗಿದೆ. ಬಿ.ಸಿ.ರೋಡ್- ಅಡ್ಡಹೊಳೆ: 821 ಕೋಟಿ ರೂ. ಯೋಜನೆ
ಬಿ.ಸಿ. ರೋಡ್‌ನಿಂದ ಅಡ್ಡಹೊಳೆಯ ವರೆಗೆ 821 ಕೋಟಿ ರೂ. ವೆಚ್ಚದಲ್ಲಿ 63 ಕಿ.ಮೀ. ಉದ್ದದಲ್ಲಿ ಸುಸಜ್ಜಿತ ಚತುಷ್ಪಥ ಕಾಂಕ್ರೀಟ್ ರಸ್ತೆಗೆ 2016ರ ಮಾ.28ರಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಶಿಲಾನ್ಯಾಸ ನೆರವೇರಿಸಿದ್ದರು. ರಸ್ತೆ ನಿರ್ಮಾಣದ ಜತೆಗೆ 14.5 ಕಿ.ಮೀ. ಸರ್ವೀಸ್ ರಸ್ತೆ, ಎರಡು ಮೇಲ್ಸೇತುವೆ, ಎರಡು ದೊಡ್ಡ ಸೇತುವೆ, 14 ಸಣ್ಣ ಸೇತುವೆ, 9 ಅಂಡರ್‌ಪಾಸ್, 1 ಟೋಲ್ ಗೇಟ್ ನಿರ್ಮಿಸಲು ಟೆಂಡರ್ ನೀಡಲಾಗಿತ್ತು.
ಕಾಮಗಾರಿಗಾಗಿ ಬಿ.ಸಿ. ರೋಡ್‌ನಿಂದ ಅಡ್ಡಹೊಳೆಯ ವರೆಗೆ 270.65 ಹೆಕ್ಟೇರ್ ಜಮೀನಿನ ಆವಶ್ಯಕತೆ ಇದ್ದು, 251.54 ಹೆಕ್ಟೇರ್ ಜಾಗ ಭೂಸ್ವಾಧೀನವಾಗಿದೆ, 15.02 ಹೆಕ್ಟೇರ್ ಭೂಸ್ವಾಧೀನ ಬಾಕಿ ಇದೆ. ಈವರೆಗೆ 122 ಕೋಟಿ ರೂ. ಹಣವನ್ನು ಪರಿಹಾರವಾಗಿ ನೀಡಲಾಗಿದೆ. ಪುತ್ತೂರು, ಉಪ್ಪಿನಂಗಡಿ, ಬಂಟ್ವಾಳ ಅರಣ್ಯ ವಲಯದಿಂದ 10,196 ಮರಗಳನ್ನು ಕಡಿಯಲು ಅನುಮತಿ ಸಿಕ್ಕಿದೆ. ಗುತ್ತಿಗೆದಾರರು ಸುಮಾರು 7 ಸಾವಿರ ಮರಗಳನ್ನು ಕಡಿದು 45 ಕಿ.ಮೀ.ಗಳಷ್ಟು ಭೂಮಿಯಲ್ಲಿ ಕೆಲಸ ಪ್ರಾರಂಭಿಸಿದ್ದಾರೆ.
Related Articles
ನಳಿನ್ ಕುಮಾರ್ ಕಟೀಲು ಸಂಸದರು.
Advertisement
ಆರಂಭವಾಗಿದ್ದ ಸೇತುವೆ ಕಾಮಗಾರಿನೇತ್ರಾವತಿ ನದಿಯ ನೂತನ ಸೇತುವೆಗೆ ಪಿಲ್ಲರ್ ನಿರ್ಮಾಣ ಆರಂಭವಾಗಿತ್ತು. ಆದರೆ ಎನ್‌ಎಚ್‌ಎಐ ಮತ್ತು ಕಂಪೆನಿ ನಡುವಣ ಭಿನ್ನಾಭಿಪ್ರಾಯ ಅಥವಾ ಹೊಂದಾಣಿಕೆಯ ಕೊರತೆಯಿಂದ ಇಡೀ ಕಾಮಗಾರಿಯೇ ಸ್ಥಗಿತಗೊಳ್ಳುವ ಹಂತ ತಲುಪಿದೆ. ಮುಂದಿನ ಆರ್ಥಿಕ ವರ್ಷಾಂತ್ಯಕ್ಕೆ ಬಹುತೇಕ ಕಾಮಗಾರಿ ಮುಗಿಸಿ ಬಳಕೆಗೆ ತೆರೆದುಕೊಳ್ಳಬೇಕಿದ್ದ, ಮಂಗಳೂರು -ಬೆಂಗಳೂರು ಪ್ರಯಾಣ ಅವಧಿಯನ್ನು 3 ಗಂಟೆಗಳಷ್ಟು ಕಡಿಮೆ ಮಾಡಬಹುದಾಗಿದ್ದ ಯೋಜನೆಗೆ ಈಗ ಗ್ರಹಣ ಹಿಡಿದಿದೆ. ರಾಜಾ ಬಂಟ್ವಾಳ