Advertisement

ಉತ್ತರ ಪ್ರದೇಶ: ನಿಂತಿದ್ದ ಟ್ರಕ್ಕಿಗೆ ಕಾರು ಢಿಕ್ಕಿ; ನಾಲ್ವರ ಸಾವು

12:23 PM Jul 21, 2018 | Team Udayavani |

ಬಾರಾಬಂಕಿ, ಉತ್ತರ ಪ್ರದೇಶ : ಇಲ್ಲಿನ ಸಫೇದಾಬಾದ್‌ ಕ್ರಾಸಿಂಗ್‌ ಸಮೀಪ ನಿಂತಿದ್ದ ಟ್ರಕ್ಕಿಗೆ ಕಾರೊಂದು ಢಿಕ್ಕಿಯಾದ ಕಾರಣ ಕನಿಷ್ಠ ನಾಲ್ವರು ಮೃತಪಟ್ಟು ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ. 

Advertisement

ಸಫೇದಾಬಾದ್‌ ಕ್ರಾಸಿಂಗ್‌ ತಿರುವಿನಲ್ಲಿ ಚಾಲಕನಿಗೆ ನಿಯಂತ್ರಣ ತಪ್ಪಿದ ಕಾರಣ ಕಾರು ನಿಂತಿದ್ದ ಟ್ರಕ್ಕಿಗೆ ಢಿಕ್ಕಿ ಹೊಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಪವನ್‌ 38, ಶೈಲೇಶ್‌ 40, ರಾಜೀವ್‌ 41 ಮತ್ತು ನಾಗೇಂದ್ರ 38 ಎಂದು ಗುರುತಿಸಲಾಗಿದೆ. ಇವರು ಲಕ್ನೋದಲ್ಲಿ ಒಂದು ಸಭೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದರು. 

ಗಂಭೀರವಾಗಿ ಗಾಯಗೊಂಡಿರುವ ಕಾರು ಚಾಲಕನನ್ನು ಲಕ್ನೋ ಟ್ರೋಮಾ ಸೆಂಟರ್‌ಗೆ ಸೇರಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next